Advertisement
ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ವಿಧಾನಸಭೆ ಕಲಾಪ 10.30ಕ್ಕೆ ಆರಂಭ ವಾಯಿತು. ಕೂಡಲೇ ಬಾವಿಗಿಳಿದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು, ಗುರುವಾರ ಸರಕಾರ ಕೈಗೊಂಡ ನಿರ್ಣಯವನ್ನು ಖಂಡಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಿನ್ನೆ ಏಕಾಏಕಿ ಕೇಂದ್ರ ಸರಕಾರದ ವಿರುದ್ಧ ನಿರ್ಣಯ ಮಂಡಿಸಲು ಅವಕಾಶ ಕೊಟ್ಟಿದ್ದೀರಿ. ಕಲಾಪ ಸಲಹಾ ಸಮಿತಿಯಲ್ಲಿ ಕೆಲವು ಮಸೂದೆಗಳ ಮಂಡನೆ ಬಗ್ಗೆ ಮಾತ್ರ ನಮ್ಮ ಗಮನಕ್ಕೆ ತಂದಿದ್ದೀರಿ. ಸಭಾಧ್ಯಕ್ಷ ಪೀಠ ಹಾಗೂ ಸದನಕ್ಕೆ ಗೌರವ ಕೊಟ್ಟು ನಾವೂ ಸಹಕರಿಸಿದ್ದೇವೆ. ಜನಪರವಾದ ಮಸೂದೆಗಳಿಗೆ ಒಪ್ಪಿಗೆ ಕೊಟ್ಟಿದ್ದೇವೆ. ಆದರೆ ಕಾನೂನು ಸಚಿವರು ಏಕಾಏಕಿ ನಿರ್ಣಯ ಓದಿದ್ದರ ಅರ್ಥವೇನು? ಕದ್ದು ಮುಚ್ಚಿ ವ್ಯಾಪಾರ ಮಾಡು ವಂಥದ್ದೇ ನಿತ್ತು? ಕೇಂದ್ರ ಸರಕಾರದ ವಿರುದ್ಧ ಸಂತೆ ಭಾಷಣ ಮಾಡಲು ಇಲ್ಲಿ ಅವಕಾಶ ಇತ್ತೇ? ಇದು ಸದನ ಅಲ್ಲವೇ ಎಂದು ಕಿಡಿಕಾರಿದರು. ನಿಮ್ಮ ಅನುಮತಿ ಪಡೆಯಬೇಕಿಲ್ಲ
ಸರಕಾರದ ಕ್ರಮವನ್ನು ಸಮರ್ಥಿಸಿದ ಸಚಿವ ಎಚ್.ಕೆ. ಪಾಟೀಲ್, ನಿರ್ಣಯ ದಲ್ಲಿ ರಾಜ್ಯದ ಹಿತರಕ್ಷಣೆ ಮಾಡುವ ಅಂಶಗಳಿವೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತ ಮಾಡಿದ್ದೇವೆ. ಅಂಕಿ ಅಂಶಗಳನ್ನು ಪ್ರಸ್ತಾ ವಿಸಿದ್ದೇವೆ. ಯಾವು ದನ್ನೂ ಮುಚ್ಚು ಮರೆ ಮಾಡಿಲ್ಲ. ಇಡೀ ಸದನ ನಾವು ಮಂಡಿಸಿದ ನಿರ್ಣಯವನ್ನು ಒಪ್ಪಿದೆ. ನಿಮ್ಮ ಅನುಮತಿ ಪಡೆದು ನಾವು ಮಾಡಬೇಕಿಲ್ಲ. ಕನ್ನಡ ನಾಡಿನ ಪರ ಧ್ವನಿ ಎತ್ತಲು ನಮಗೆ ನಿಮ್ಮ ಅನುಮತಿ ಬೇಕಿಲ್ಲ. ಕಾನೂನು ಪ್ರಕಾರವೇ ನಿರ್ಣಯ ಅಂಗೀಕರಿಸಿದ್ದೇವೆ. ಈ ನಿರ್ಣಯವನ್ನು ನೀವೂ ಒಪ್ಪಬೇಕು. ನಿಮಗೆ ಕರ್ನಾಟಕ ಬೇಕೋ? ರಾಜಕೀಯ ಬೇಕೋ ತೀರ್ಮಾನಿಸಿ ಎಂದು ಸವಾಲು ಹಾಕಿದರು.
Related Articles
ಅಶೋಕ್ ಪ್ರತಿಕ್ರಿಯಿಸಿ, ನಿರ್ಣಯ ಮಂಡಿಸಿ, ಅನುಮೋದನೆ ಪಡೆಯಲು ನಮ್ಮ ಅಭ್ಯಂತರ ಇಲ್ಲ. ಲೋಕಸಭೆಯಲ್ಲಿ ಸಂಸದರು ಕಡ್ಲೆಕಾಯಿ ತಿನ್ನುತ್ತಿದ್ದಾರೆಯೇ? ಲೋಕಸಭೆ, ರಾಜ್ಯಸಭೆಗಳು ಏಕಿರು ವುದು? ಅಲ್ಲಿ ಅವಕಾಶ ಕೊಟ್ಟಾಗ ಚರ್ಚಿಸದೆ, ಮಾತನಾಡುವ ಧೈರ್ಯ ತೋರದೆ, ಕಲಾಪ ನಡೆಸಲು ಬಿಡದೆ ಇಲ್ಲಿ ನಿರ್ಣಯ ಕೈಗೊಂಡಿದ್ದು ರಾಜ ಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.
Advertisement
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಿಮ್ಮವರೇ 25 ಸಂಸದರಿದ್ದಾರೆ. ಬರೀ ಓಳು ಬಿಟ್ಟುಕೊಂಡಿದ್ದಾರೆ. ಎಂಎಸ್‌ಪಿ ಹೆಚ್ಚಿಸಿ ಎನ್ನುತ್ತಿರುವ ರೈತರನ್ನು ಗುಂಡಿಕ್ಕಿ ಹೊಡೆಯುತ್ತಿದ್ದಾರೆ. ಗೋಹತ್ಯೆ ಕಾನೂನು ಮಾಡುವಾಗ ನೀವು ಯಾವ ಪ್ರಕ್ರಿಯೆ ಅನುಸರಿಸಿದ್ದಿರಿ? ಆಗ ನಡೆಸಿದ ಪ್ರಕ್ರಿಯೆಗಳ ಪ್ರಜ್ಞೆ ಇರಲಿಲ್ಲವೇ? ಪ್ರಜ್ಞೆ ಇಟ್ಟುಕೊಂಡು ನೀತಿ ಪಾಠ ಎನ್ನುತ್ತಿದ್ದಂತೆ ಗದ್ದಲ ಸೃಷ್ಟಿಯಾಯಿತು.
ಕಲಾಪ ಮುಂದೂಡಿಕೆಬಿಜೆಪಿಯ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಬಂಧ, ಅಧಿಕಾರ, ತೆರಿಗೆ ಹಂಚಿಕೆ ಇತ್ಯಾದಿಗಳ ಬಗ್ಗೆ ಸ್ವತಂತ್ರ ಬಂದಾಗಿನಿಂದ ಚರ್ಚೆ ನಡೆಯುತ್ತಲೇ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಬೆಂಬಲಿತ ಪಕ್ಷಗಳೇ 55 ವರ್ಷ ದೇಶವನ್ನು ಆಳಿವೆ. ಶೇ.20ರಷ್ಟಿದ್ದ ತೆರಿಗೆ ಪಾಲನ್ನು ಶೇ.30ಕ್ಕೆ ಏರಿಸಲು ಎಲ್ಲ ಪಕ್ಷಗಳೂ 3 ದಶಕಗಳ ಕಾಲ ಪ್ರಯತ್ನಿಸಿದ್ದವು. ಅನಂತರ ಅದನ್ನು ಶೇ.40ಕ್ಕೆ ಹೆಚ್ಚಿಸಲು 10 ವರ್ಷ ಯುಪಿಎ ಸರಕಾರಕ್ಕೆ ಕೇಳಿದರೂ ಮಾಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರಕಾರ ಶೇ.42ಕ್ಕೆ ಏರಿಸಿದೆ. ಇದನ್ನು ನೀವು ಮರೆಮಾಚಿದ್ದೀರಿ ಎಂದಾಗ ಆಡಳಿತ ಪಕ್ಷದವರು ವಿರೋಧಿಸಲು ಮುಂದಾದರು. ಗದ್ದಲ ಜೋರಾದ್ದರಿಂದ 10 ನಿಮಿಷ ಕಲಾಪ ಮುಂದೂಡ ಲಾಯಿತು. ಮತ್ತೆ ಸಮಾವೇಶಗೊಂಡಾಗಲೂ ಗದ್ದಲ ಮುಂದುವರಿದು ಎರಡು ಮಸೂದೆಗಳಿಗೆ ಅನುಮೋದನೆ ಹಾಗೂ ಹಣಕಾಸು ಆಯೋಗದ ವರದಿ ಮಂಡಿಸಿ ಸೋಮವಾರಕ್ಕೆ ಕಲಾಪವನ್ನು ಮುಂದೂಡಲಾಯಿತು.