Advertisement

ನ್ಯಾ|ಸಂದೇಶ್‌ ಆದೇಶ ಪ್ರಶ್ನಿಸಿ ಎಡಿಜಿಪಿ ಸೀಮಂತ್‌ ಕುಮಾರ್‌ ಸುಪ್ರೀಂಗೆ

10:49 PM Jul 11, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ತಮ್ಮ ವಿರುದ್ಧ ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಗಂಭೀರ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿಯ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಇದೇ ವಿಚಾರವಾಗಿ ಇವರು ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆಗೆ ಬರುವ ಮೊದಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.

ಅರ್ಜಿ ಸಂಬಂಧ ಸಿಜೆಐ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ ತುಷಾರ ಮೆಹ್ತಾ ಸೋಮವಾರ ಹಾಜರಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದರು.

ಸಿಂಗ್‌ ಪರ ವಕೀಲರ ಮನವಿಯನ್ನು ಆಲಿಸಿದ ಬಳಿಕ, ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದ ಸಿಜೆಐ, ಆ ಪ್ರಕರಣದಲ್ಲಿ ನೀವು ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆ ಹಾಕಿದ್ದೀರಂತೆ. ಅದು ನಿಜವೇ? ನೀವು (ಅರ್ಜಿದಾರರು) ಅಷ್ಟೊಂದು ಪ್ರಭಾವಶಾಲಿ ಅಧಿಕಾರಿಯೇ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಎಸ್‌ಜಿಐ, ಅದೆಲ್ಲ ಮಾಧ್ಯಮಗಳ ವರದಿಯಷ್ಟೆ. ಅದು ನಿಜವಲ್ಲ. ಇದರಿಂದ ಸಂಸ್ಥೆಯ ಘನತೆಗೆ ಭಾರಿ ಧಕ್ಕೆಯಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next