Advertisement

Karnataka; ರೈಲ್ವೇ ಬಜೆಟ್‌ನಲ್ಲಿ 7,000 ಕೋಟಿ ರೂ.: ಮೋದಿ

01:09 AM Sep 01, 2024 | Team Udayavani |

ಹೊಸದಿಲ್ಲಿ: ಮಧುರೈ-ಬೆಂಗಳೂರು ಸೇರಿದಂತೆ 3 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಹೊಸದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು “ಕರ್ನಾಟಕಕ್ಕೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 7000 ಕೋಟಿ ರೂ. ಮೊತ್ತವನ್ನು ನೀಡಿದ್ದೇವೆ. ಇದು 2014ರಲ್ಲಿ ನೀಡಲಾಗಿದ್ದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು. ಹೀಗಾಗಿ ಕರ್ನಾಟಕದಲ್ಲಿ ರೈಲ್ವೇ ಜಾಲ ಬಲಗೊಂಡಿದೆ ಎಂದರು.

Advertisement

ಮೇರಟ್ ಸಿಟಿ-ಲಕ್ನೋ ಹಾಗೂ ಚೆನ್ನೈ ಎಗ್ಮೋ ರ್‌-ನಾಗರ್‌ ಕೊಯಿಲ್‌ ಶನಿವಾರ ಲೋಕಾರ್ಪಣೆಗೊಂಡ ಇತರ 2 ವಂದೇ ಭಾರತ್‌ ರೈಲುಗಳಾಗಿವೆ. ಮಧುರೈ- ಬೆಂಗಳೂರು ನಡುವಿನ ರೈಲು ಸಂಚಾರದಿಂದ ಕರ್ನಾ ಟಕದಲ್ಲಿ ಸಂಚರಿಸಲಿರುವ ವಂದೇ ಭಾರತ್‌ ರೈಲುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಜತೆಗೆ ಮಧುರೈ ಮತ್ತು ಬೆಂಗಳೂರಿನ ನಡುವೆ ಸಂಚರಿಸಲಿರುವ 2ನೇ ರೈಲು ಇದಾಗಿದೆ. ಅಲ್ಲದೇ ತಿರುಚಿನಪಳ್ಳಿ ಮಾರ್ಗವಾಗಿ ಸಂಚರಿಸಲಿರುವ ಮೊದಲ ವಂದೇ ಭಾರತ್‌ ರೈಲು ಕೂಡ ಇದಾಗಿದೆ.

ಇದೇ ವೇಳೆ “ಹಲವು ವರ್ಷಗಳ ಕಠಿನ ಪರಿಶ್ರಮದ ಬಳಿಕ ಇದೀಗ ದೀರ್ಘ‌ಕಾಲದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರೈಲ್ವೆ ದಾಪುಗಾಲನ್ನು ಇರಿಸಿದೆ. ಹೊಸ ಭರವಸೆಯನ್ನೂ ಮೂಡಿಸಿದೆ. ದೇಶದ ಎಲ್ಲರಿಗೂ ಭಾರತೀಯ ರೈಲ್ವೇಯಲ್ಲಿ ಆರಾಮದಾಯಕ ಪ್ರಯಾಣ ಖಾತರಿಯಾಗುವವರೆಗೂ ರೈಲ್ವೇ ಸುಧಾರಣೆಯ ನಮ್ಮ ಪ್ರಯತ್ನ ನಿಲ್ಲುವುದಿಲ್ಲ’ ಎಂದು ಹೇಳಿದ್ದಾರೆ.

ವಂದೇ ಭಾರತ್‌ ರೈಲುಗಳ ಜಾಲ ವಿಸ್ತರಿಸುವ ಮೂಲಕ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ)ದ ಗುರಿಯನ್ನು ಸಾಕಾರಗೊಳಿಸುವ ಪ್ರಯತ್ನದತ್ತ ಮುನ್ನಡೆಯುತ್ತಿದ್ದೇವೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ರೈಲ್ವೇ ಇಲಾಖೆಗೆ 2.5 ಲಕ್ಷ ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಅದರ ಮೂಲಕ ಭಾರತೀಯ ರೈಲ್ವೇ ವ್ಯವಸ್ಥೆಯನ್ನು ಆಧುನೀಕರಣ ಗೊಳಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next