Advertisement

ಕಾರ್ನಾಡು ಜಂಕ್ಷನ್‌: ದಾರಿದೀಪ ಸಮಸ್ಯೆ

10:27 AM Oct 31, 2018 | |

ಮೂಲ್ಕಿ : ದಾರಿ ದೀಪದ ವ್ಯವಸ್ಥೆ ಸರಿಯಾಗಿಲ್ಲದೇ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ ಅಪಘಾತ ವಲಯವಾಗಿ ಪರಿಣಮಿಸಿದೆ. ಮೂಲ್ಕಿ ಸಮೀಪದ ಕಾರ್ನಾಡು ಕೈಗಾರಿಕಾ ಪ್ರದೇಶದ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಇಲ್ಲಿ ದಾರಿ ದೀಪದ ವ್ಯವಸ್ಥೆ ಸರಿಯಾಗಿಲ್ಲದಿರುವುದೇ ಮುಖ್ಯ ಕಾರಣವಾಗಿದೆ.

Advertisement

ಈ ಜಂಕ್ಷನ್‌ನಲ್ಲಿ ಕಾರ್ನಾಡು ಸದಾಶಿವ ರಾವ್‌ ನಗರ ಮತ್ತು ಕಿನ್ನಿಗೋಳಿ ಮತ್ತು ಮೂಲ್ಕಿ ರೈಲು ನಿಲ್ದಾಣಕ್ಕೆ ತೆರಳುವ ನೂರಾರು ವಾಹನಗಳು  ಸಂಚರಿಸುತ್ತಿದೆ. ಕತ್ತಲೆಯಲ್ಲಿ ಇಲ್ಲಿ ಸಂಚಾರ ಸಂಚಕಾರವಾಗುತ್ತಿದೆ. ನಿತ್ಯವೂ ರಾತ್ರಿ ವೇಳೆ ಬಸ್‌ ಇಳಿದು ಕತ್ತಲೆಯಲ್ಲಿ ರಸ್ತೆ ದಾಟಲು ಸಾರ್ವಜನಿಕರು ಪರದಾಡುವಂತಾಗಿದೆ.

ಮೂಲ್ಕಿ ನಗರ ಪಂಚಾಯತ್‌ನ ಕಾರ್ನಾಡು ಗ್ರಾಮದ ಗಡಿ ಪ್ರದೇಶವಾಗಿರುವ ಈ ಪ್ರದೇಶದಿಂದ ನಿತ್ಯ ಬಸ್‌ ಗಳು ಮಂಗಳೂರು, ಉಡುಪಿ ಮತ್ತು ಕಾರ್ಕಳದತ್ತ ಸಂಚರಿಸುತ್ತದೆ. ನಿತ್ಯವೂ ಸಾವಿರಾರು ಮಂದಿ ವಾಹನಗಳು ಸಂಚರಿಸುವ ಈ ಭಾಗದಲ್ಲಿ ತುರ್ತಾಗಿ ಹೆದ್ದಾರಿ ಇಲಾಖೆಯಿಂದ ದಾರಿ ದೀಪದ ವ್ಯವಸ್ಥೆ ಮಾಡಬೇಕಾಗಿದೆ. ಕಾರ್ನಾಡು ಬೈಪಾಸ್‌ನ ಲಾರಿ ಬೇವರೆಗೆ ಇರುವ ದಾರಿ ದೀಪವನ್ನು ಈ ಕಡೆಗೂ ವಿಸ್ತರಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. 

ಹೆದ್ದಾರಿ ಇಲಾಖೆಗೆ ಪತ್ರ
ನಗರ ಪಂಚಾಯತ್‌ ವ್ಯಾಪ್ತಿಯ ಬಿಜಾಪುರ ಕಾಲನಿಯ ಸಹಸ್ರಾರು ಕೂಲಿ ಕಾರ್ಮಿಕರು ಮಾತ್ರವಲ್ಲದೆ, ಸಮೀಪದ ಕಿಲ್ಪಾಡಿ, ಕಿನ್ನಿಗೋಳಿ, ಪುನರೂರು ಮತ್ತು ಇತರ ಪ್ರದೇಶಗಳ ಜನರು ಈ ಜಂಕ್ಷನ್‌ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇಲ್ಲಿನ ರಸ್ತೆಯುದ್ದಕ್ಕೂ ದಾರಿದೀಪ ಅಳವಡಿಸಿ ರಸ್ತೆ ಸುರಕ್ಷೆಗೆ ಸಹಕರಿಸುವಂತೆ ನಗರ ಪಂಚಾಯತ್‌ನಿಂದ ಹೆದ್ದಾರಿ ಇಲಾಖೆಗೆ ಈ ಹಿಂದೆಯೇ ಪತ್ರ ಬರೆಯಲಾಗಿದೆ.
 - ಸುನಿಲ್‌ ಆಳ್ವ, ಅಧ್ಯಕ್ಷ, ನಗರ ಪಂಚಾಯತ್‌ ಮೂಲ್ಕಿ

ದಾರಿ ದೀಪ ಅಳವಡಿಸಿದರೆ ಸಮಸ್ಯೆ ಪರಿಹಾರ
ಮೂಲ್ಕಿ ಠಾಣಾ ವ್ಯಾಪ್ತಿಯ ಈ ಪ್ರದೇಶದಲ್ಲಿ ರಾತ್ರಿ ಮತ್ತು ಬೆಳಗ್ಗೆ ಬಹಳಷ್ಟು ಜನರು ಪ್ರಯಾಣಿಸುತ್ತಾರೆ. ದೂರದ ಪ್ರದೇಶಗಳಿಗೆ ತಮ್ಮ ವಾಹನಗಳನ್ನು ಇಲ್ಲಿ ನಿಲ್ಲಿಸಿ ಬಸ್‌ಗಳ ಮೂಲಕ ಹೋಗವವರು, ಪಾದಚಾರಿ ಹಾಗೂ ಸಾವಿರಾರು ಕೂಲಿ ಕಾರ್ಮಿಕರು ಈ ಜಂಕ್ಷನ್‌ ಮೂಲಕ ತೆರಳುತ್ತಾರೆ. ರಾತ್ರಿ ವೇಳೆ ಇಲ್ಲಿ ಕತ್ತಲೆ ಹೆಚ್ಚಾಗಿರುವುದರಿಂದ ಈಗಾಗಲೇ ಈ ಪ್ರದೇಶದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ದಾರಿ ದೀಪ ಅಳವಡಿಸಿದಲ್ಲಿ ಇದು ನಿಯಂತ್ರಣಕ್ಕೆ ಬರಲು ಸಾಧ್ಯ.
– ಅನಂತಪದ್ಮನಾಭ
ಠಾಣಾಧಿಕಾರಿ, ಮೂಲ್ಕಿ, ಪೊಲೀಸ್‌ ಠಾಣೆ 

Advertisement

ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next