Advertisement

ಕಾರ್ಕಳ ಉತ್ಸವ ಅದ್ಭುತ ಕಲ್ಪನೆ: ಸುಬ್ರಹ್ಮಣ್ಯ ಶ್ರೀ; ಇಂದು ಪ್ರದರ್ಶನ ಮಳಿಗೆ ಉದ್ಘಾಟನೆ

01:02 AM Mar 14, 2022 | Team Udayavani |

ಕಾರ್ಕಳ: ಸಂಸ್ಕೃತಿ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ಸಿಗಬೇಕು. ಜತೆಗೆ ಆರ್ಥಿಕವಾಗಿ ಸಶಕ್ತರಾಗಿ ಬೌದ್ಧಿಕವಾಗಿ ಎತ್ತರಕ್ಕೆ ಏರಬೇಕು. ಈ ಎಲ್ಲ ಕಾರಣಕ್ಕೆ ಸಚಿವ ವಿ. ಸುನಿಲ್‌ ಕುಮಾರ್‌ ಕಾರ್ಕಳ ಉತ್ಸವ ಎನ್ನುವ ಅದ್ಭುತ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಹೇಳಿದರು.

Advertisement

ಕಾರ್ಕಳ ಉತ್ಸವ ಕಚೇರಿ ಮತ್ತು ಮಾದರಿ ಅರಣ್ಯ ವೀಕ್ಷಣೆ ನಡೆಸಿದ ಅವರು ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆಯ ವ್ಯಕ್ತಪಡಿಸಿದರು. ಪ್ರಕೃತಿಯ ಜತೆಗೆ ಬದುಕುವವರು ನಾವು. ಪ್ರಕೃತಿ ಪೂರಕ ವಾತಾವರಣ ಸೃಷ್ಟಿಯಾಗಬೇಕು, ಶ್ರವಣೇಂದ್ರಿಯಕ್ಕಿಂತ ದೃಶ್ಯೆàಂದ್ರಿಯದ ಮೂಲಕ ಆಗುವ ಅನುಭವ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.

ಸಚಿವರಿಂದ ದೋಣಿ ವಿಹಾರ
ಮೈಸೂರು ದಸರಾ, ಹಂಪಿ ಉತ್ಸವ ಮೀರುವ ರೀತಿಯಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದೆ. ಆಕರ್ಷಣೀಯ ವಿದ್ಯುತ್‌ ಅಲಂಕಾರ, ಹಲವು ಬಗೆಯ ವೈಶಿಷ್ಟéಗಳನ್ನು ವೀಕ್ಷಿಸಲು ವಿವಿಧೆಡೆಯಿಂದ ಸಹಸ್ರಾರು ಮಂದಿ ಆಗಮಿಸುತ್ತಿದ್ದಾರೆ. ರವಿವಾರ ಸಚಿವ ಸುನಿಲ್‌ ಅವರು ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರ ಜತೆಗೂಡಿ ದೋಣಿ ವಿಹಾರ ನಡೆಸಿದರು.

ರಾಜ್ಯಪಾಲರು ಇಂದು ಕಾರ್ಕಳಕ್ಕೆ
ರಾಜ್ಯಪಾಲ ಥಾವರ್‌ಚಂದ್‌ ಗೆಹೊÉàಟ್‌ ಮಾ. 14ರಂದು ಸಂಜೆ 5 ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

250 ಮಳಿಗೆಗಳು
ಸ್ವರಾಜ್‌ ಮೈದಾನದಲ್ಲಿ 250 ಮಳಿಗೆಗಳು ಸಿದ್ಧಗೊಳ್ಳುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳ ಗೊಂಬೆ, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಶಿಲ್ಪಕಲೆ, ಕೃಷಿ, ಬ್ಯಾಗ್‌, ವಿವಿಧ ರಾಜ್ಯಗಳ ಕರ ಕುಶಲ ವಸ್ತುಗಳ ಮಳಿಗೆಗಳು ಇರಲಿವೆ. ವಿವಿಧ ಇಲಾಖೆಗಳ ಪ್ರದರ್ಶನ ಸ್ಟಾಲ್‌ಗ‌ಳು, ಸಸ್ಯಾಹಾರ, ಮಾಂಸಾಹಾರ ಮಳಿಗೆಗಳು, ನಂದಿನಿ ಮಳಿಗೆ, ತಂಪು ಪಾನೀಯ, ಅಕ್ಕಿ ರೊಟ್ಟಿ, ರಾಗಿ ಮು¨ªೆ, ಜೋಳದ ರೊಟ್ಟಿ ಹೊಟೇಲ್ , ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್ ಮುಂತಾದ ಅಂಗಡಿಗಳು ಇರಲಿದ್ದು ಮಾ.14ರಂದು ಉದ್ಘಾಟನೆಗೊಳ್ಳಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next