Advertisement
ಒಂದು ಬದಿಯಲ್ಲಿ ರಸ್ತೆ ಎತ್ತರ ಇರುವುದರಿಂದ ಅತ್ತೂರು ಚರ್ಚ್ ಕಡೆಯಿಂದ ಬರುವವರು ವೇಗದಿಂದ ಆಗಮಿಸುತ್ತಾರೆ. ಅಲ್ಲಿಂದ ಯೂ. ಟರ್ನ್ ಪಡೆದು ಮುಂದಕ್ಕೆ ಸಾಗುವ ಪ್ರಕ್ರಿಯೆ ವೇಳೆ ಆಚೀಚೆ ಓಡಾಡುವ ವಾಹನಗಳಿಂದ ಢಿಕ್ಕಿ ಸಂಭವಿಸಿ ಅಪಘಾತಗಳು ನಡೆಯುತ್ತಿವೆ. ಇತ್ತೀಚೆಗೆ ಯೂ.ಟರ್ನ್ ಪಡೆಯುವ ವೇಳೆ ಇಬ್ಬರು ಶಾಲೆ ವಿದ್ಯಾರ್ಥಿಗಳ ಸೈಕಲ್ ಢಿಕ್ಕಿ ಹೊಡೆದು ಇಬ್ಬರು ಗಾಯ ಗೊಂಡಿದ್ದಾರೆ. ಅಲ್ಲದೆ ಎರಡು ಕಡೆಯ ರಸ್ತೆಗಳಲ್ಲಿಯೂ ಸವಾರರು ವಿರುದ್ದ ದಿಕ್ಕಿನಲ್ಲಿ ಸಂಚರಿಸುವುದರಿಂದ ಅಪಘಾತ ಸಂಭವಿಸಲು ಕಾರಣವಾಗುತ್ತಿದೆ. ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಒಂದು ಬದಿಯಲ್ಲಿ ಎತ್ತರವಾಗಿ ನಿರ್ಮಿಸಿದ್ದೆ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ರೂಪಿಸಿದ ಅವೈಜ್ಞಾನಿಕ ರಸ್ತೆ ಇದಾಗಿದ್ದು, ಈಗಾಗಲೆ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದೆ. ವಿರುದ್ಧ ದಿಕ್ಕಿನಲ್ಲಿ ಸವಾರರ ಸಂಚಾರ, ಒಂದು ಕಡೆ ಎತ್ತರ, ಒಂದು ಬದಿಯಲ್ಲಿ ತಗ್ಗು ಮಾಡಿ ರಸ್ತೆ ನಿರ್ಮಿಸಿದ್ದಾರೆ. ಇಳಿಜಾರು ಭಾಗದಲ್ಲಿ ಯು ಟರ್ನ್ ಕಲ್ಪಿಸಿದ ಪರಿಣಾಮ ಅಪಘಾತಗಳು ಸಂಭವಿಸುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸೂಕ್ತ ಬದಲಾವಣೆ ಮಾಡಬೇಕು.
– ನವೀನ್ ದೇವಾಡಿಗ, ಮಾಜಿ ಸದಸ್ಯರು, ಪುರಸಭೆ.