ಕಾರ್ಕಳ: ಘಾಟಿ ಮಾರ್ಗ ಮಾಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬ್ಟಾಸ್ ಕಟ್ಟಿಂಗ್ ಎಂಬಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸಾಕ್ಷಾತ್. ಸಹಸವಾರ ಸತೀಶ ಎಂಬವರು ಗಾಯಗೊಂಡ ಘಟನೆ ಫೆ.5ರಂದು ನಡೆದಿದೆ.
Advertisement
ಎಸ್ಕೇ ಬಾರ್ಡರ್ ಕಡೆಯಿಂದ ಮಾಳ ಕಡೆಗೆ ಬೈಕ್ ಸವಾರ ಸಾಕ್ಷತ್ ಎಂಬವರು ಸತೀಶ ಎಂಬುವವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ತೆರಳುತಿದ್ದರು. ಮಾಳ ಕಡೆಯಿಂದ ಎಸ್.ಕೆ ಬಾರ್ಡರ್ ಕಡೆಗೆ ಟಿಪ್ಪರ್ ತೆರಳುತಿದ್ದ ವೇಳೆ ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.