Advertisement
ಮಳೆಗಾಲ ಆರಂಭದ ಪೂರ್ವದಲ್ಲಿ ನಗರದೊಳಗಿನ ರಸ್ತೆಗಳು ಹಲವು ಕಡೆಗಳಲ್ಲಿ ಸಂಪೂರ್ಣ ಹದಗೆಟ್ಟಿತ್ತು. ವಾಹನ ಸವಾರರು, ನಾಗರಿಕರ ಆಕ್ರೋಶ ಮುಗಿಲು ಮುಟ್ಟಿತ್ತು. ಕೊನೆಗೂ ಎಚ್ಚೆತ್ತು ಕೊಂಡ ಪುರಸಭೆ ಹದಗೆಟ್ಟ ರಸ್ತೆಗಳ ದುರಸ್ತಿಗೆ ಮುಂದಾಗಿತ್ತು. ಹೊಂಡ ಗುಂಡಿಯ ರಸ್ತೆಗಳು ಮುಚ್ಚಿಕೊಂಡು ಸಂಚಾರ ಸುಗಮವಾಗಿತ್ತು. ಆದರೆ ಬಳಿಕ ಮಳೆ ಧಾರಾಕಾರ ಸುರಿದ ಪರಿಣಾಮ ರಸ್ತೆಯ ಡಾಮರು ಕಿತ್ತು ಹೋಗಿದೆ.
Related Articles
ಕಾರ್ಕಳ ನಗರದಿಂದ ಉಡುಪಿ ಭಾಗಕ್ಕೆ ತೆರಳುವ ಹೆದ್ದಾರಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಾಲ್ಮರದ ವರೆಗೆ ಕಾಬೆಟ್ಟು ಭಾಗಕ್ಕೆ ತಿರುವಲ್ಲಿ ತನಕ ಅಲ್ಲಲ್ಲಿ ಡಾಮರು ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ.
Advertisement
ತಾಲೂಕು ಕಚೇರಿ ಜಂಕ್ಷನ್‌ನಿಂದ ಉಡುಪಿ ಭಾಗಕ್ಕೆ ಸಂಚರಿಸುವ ರಸ್ತೆಯ ಬಂಗ್ಲೆಗುಡ್ಡೆ ಮುಖ್ಯ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ.
ತಾಲೂಕು ಕಚೇರಿ ಮುಂಭಾಗದ ಅರಣ್ಯ ಇಲಾಖೆ ವಸತಿಗೃಹಗಳ ಪಕ್ಕದಲ್ಲೆ ಸರ್ವಜ್ಞವೃತ್ತದ ಕಡೆಗೆ ತೆರುವ ರಸ್ತೆಯೂ ಹಾನಿಗೊಳಗಾಗಿದೆ.
ನಗರದ ಮೂರು ಮಾರ್ಗದಿಂದ ಆನೆಕೆರೆ ಭಾಗಕ್ಕೆ ತೆರಳುವ ರಸ್ತೆಯ ಡಾಮರು ಕಿತ್ತು ಹೋಗಿದೆ.
ಅನಂತಶಯನದಿಂದ ರಾಘವೇಂದ್ರ ಮಠದ ಕಡೆಗೆ ಹಾದು ಹೋದ ರಸ್ತೆಯೂ ಹೊಂಡಮಯ.
ಮಾರುಕಟ್ಟೆ ಮಾರ್ಗವಾಗಿ ಕಲ್ಲೊಟ್ಟೆ ಸಂಪರ್ಕಿಸಿ ಬಂಡಿಮಠ ಸಂಪರ್ಕಿಸುವ ರಸ್ತೆಯೂ ಕೆಟ್ಟಿದೆ.
ರಸ್ತೆ ಕೆಟ್ಟರೆ ಎಲ್ಲರಿಗೂ ತೊಂದರೆರಸ್ತೆಗಳು ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ ಮಾತ್ರವಲ್ಲ, ಪಾದಚಾರಿಗಳಿಗೆ ಮತ್ತು ಅಂಗಡಿಗಳಿಗೂ ತೊಂದರೆಯಾಗಿದೆ. ಪುರಸಭೆ ಸಹಿತ ಸರಕಾರಿ ಕಚೇರಿಗಳು ಇರುವ ರಸ್ತೆಗಳೂ ಹಾಳೆದ್ದು ಹೋಗಿವೆ. ಹೀಗಾಗಿ ಇಲ್ಲಿಗೆ ಬರುವ ಸಾವಿರಾರು ಮಂದಿಗೆ ಕಿರಿಕಿರಿಯಾಗುತ್ತಿದೆ. ಮೂರು ಮಾರ್ಗದಿಂದ ಮಾರುಕಟ್ಟೆ ಸಂಪರ್ಕ ರಸ್ತೆ ಕಿರಿದಾಗಿದ್ದು, ಲಘು ವಾಹನಗಳು ಗುಂಡಿ ತಪ್ಪಿಸಿ ಓಡಾಡುವುದು, ನರೂ ಅವುಗಳಿಂದ ತಪ್ಪಿಸಿಕೊಳ್ಳಬೇಕಾದ ಪ್ರಮೇಯ ಬಂದಿದೆ. ಹೊಸ ಅಧ್ಯಕ್ಷ, ಉಪಾಧ್ಯಕ್ಷರಿಗೆ ಎದುರಾದ ಮೊದಲ ಸವಾಲು
ಕಾರ್ಕಳ ಪುರಸಭೆಗೆ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ರಸ್ತೆ ಸಮಸ್ಯೆ ನಿರ್ವಹಣೆಯೇ ಮೊದಲ ಸವಾಲಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವನಿಕರ ಆಕ್ರೋಶಕ್ಕೆ ತುತ್ತಾಗುವ ಮುಂಚಿತವೇ ರಸ್ತೆ ಕಿತ್ತು ಹೋದ ಡಾಮರು ದುರಸ್ತಿಗೆ ಕ್ರಮ ವಹಿಸಬೇಕಾಗಿದೆ. ಕ್ರಿಯಾಯೋನೆ ಸಿದ್ಧಪಡಿಸಿದ್ದೇವೆ
ನಗರ ಹದಗೆಟ್ಟ ರಸ್ತೆಗಳ ತುರ್ತು ದುರಸ್ತಿಗೆ ಕ್ರಿಯಾ ಯೋನೆ ಸಿದ್ಧಪಡಿಸಿದ್ದೇವೆ. ತಾತ್ಕಾಲಿಕವಾಗಿ ದುರಸ್ತಿಗೊಳಿಸಲಿದ್ದೇವೆ. ನಗರೊಳಗಿನ ರಸ್ತೆಗಳಷ್ಟೆ ಅಲ್ಲ 23 ವಾರ್ಡ್‌ಗಳಲ್ಲಿ ಹದಗೆಟ್ಟ ರಸ್ತೆಗಳನ್ನೂ ರಿಪೇರಿ ಮಾಡುತ್ತೇವೆ.
-ಯೋಗೀಶ್ ದೇವಾಡಿಗ, ಅಧ್ಯಕ್ಷರು, ಕಾರ್ಕಳ ಪುರಸಭೆ -ಬಾಲಕೃಷ್ಣ ಭೀಮಗುಳಿ