Advertisement
ಈ ಕಿರು ಸೇತುವೆ ನಿರ್ಮಾಣಗೊಂಡಾಗ ಅಂದಿನ ರಸ್ತೆಗೆ ಪೂರಕವಾಗಿ ನಿರ್ಮಾಣಗೊಂಡಿದೆ. ಆದರೆ ಅನಂತರ ಸೇತುವೆಯ ಎರಡೂ ಭಾಗದ ರಸ್ತೆಗಳು ಅಗಲಗೊಂಡಿವೆ. ವಾಹನ ಸಂಚಾರ ಅಧಿಕವಾಗಿದೆ. ಹೀಗಾಗಿ ಸೇತುವೆ ತೀರ ಇಕ್ಕಟ್ಟಾಗಿ ವಾಹಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಎರಡೂ ಕಡೆಯಿಂದ ವಾಹನಗಳು ಬಂದರೆ ಒಂದರ ಅನಂತರ ಮತ್ತೂಂದು ಸಂಚರಿಸಬೇಕಾಗುತ್ತದೆ.
ಕಾರ್ಕಳದಿಂದ ಉಡುಪಿ ನಗರಕ್ಕೆ ಪರಪ್ಪು ಸೇತುವೆಯ ಮೂಲಕ ರಂಗನಪಲ್ಕೆ, ಪಳ್ಳಿಯಿಂದ ತೆರಳಲು ಸಾಧ್ಯವಿದೆ. ಅಲ್ಲದೇ ಬೈಲೂರು, ಹಿರಿಯಡ್ಕ ಮಾರ್ಗವಾಗಿ ಉಡುಪಿ ಸಂಚರಿಸುವುದಕ್ಕಿಂತ 6 ಕಿ.ಮೀ. ಸಂಪರ್ಕವೂ ಹತ್ತಿರವಾಗುತ್ತದೆ. ಸದ್ಯ ಬೈಲೂರು ಭಾಗದ ಮುಖ್ಯ ರಸ್ತೆ ಅಲ್ಲಲ್ಲಿ ಹೊಂಡಗುಂಡಿಗಳಿಂದ ತುಂಬಿದೆ. ಹೀಗಾಗಿ ಹಲವು ಖಾಸಗಿ ವಾಹನಗಳು ಈ ಸೇತುವೆ ಅವಲಂಬಿಸಿ ರಂಗನಪಲ್ಕೆ ಮೂಲಕ ಉಡುಪಿ ತೆರಳುತ್ತದೆ. ಅಡಿಭಾಗ ಬಿರುಕು…
ಸುಮಾರು 61 ವರ್ಷಗಳ ಹಿಂದಿನ ಸೇತುವೆ ಇದಾಗಿದ್ದು, ಶಿಥಿಲಗೊಳ್ಳುತ್ತಿದೆ. ಸೇತುವೆ ಅಡಿಭಾಗದ ಕೆಲವು ಕಡೆ ಬಿರುಕುಬಿಟ್ಟಿದ್ದು, ಅಪಾಯ ಆಹ್ವಾನಿಸುತ್ತಿದೆ. ಕೆಲವೊಂದು ವಾಹನಗಳು ಸೇತುವೆಗೆ ಢಿಕ್ಕಿ ಹೊಡೆದ ಉದಾಹರಣೆಗಳೂ ಇವೆ.
Related Articles
ಸಮೀಪದಲ್ಲೇ ಗೇರುಬೀಜ ಕಾರ್ಖಾನೆ, ಕಲ್ಲುಗಣಿಗಾರಿಕೆ ಇರುವುದರಿಂದ ಘನವಾಹನಗಳು ತೆರಳುತ್ತವೆ. ಹಲವು ಬಾರಿ ಅಪಘಾತಗಳೂ ಸಂಭವಿಸಿ ಗಾಯಗೊಂಡಿದ್ದಾರೆ. ಹೀಗಾಗಿ ಇಲ್ಲಿ ಅಗಲವಾಗಿ ಹೊಸ ಸೇತುವೆ ನಿರ್ಮಾಣ ಆಗಬೇಕು ಎನ್ನುವುದು ಸ್ಥಳೀಯರ ಆಗ್ರಹವಿದೆ.
Advertisement
ಮನವಿ ಮಾಡಲಾಗಿದೆ ಪರಪ್ಪು ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಮಾಡಲಾಗಿದೆ. ಘನ ವಾಹನಗಳು ಸೇರಿದಂತೆ ಪ್ರತೀದಿನ ಸಾವಿರಾರು ವಾಹನಗಳು ಈ ಸೇತುವೆಯನ್ನು ಅವಲಂಭಿಸಿವೆ. ಸೇತುವೆಯ ಸುತ್ತಮುತ್ತಲು ಪೊದೆಗಳು ತುಂಬಿತ್ತು. ಅದನ್ನು ತೆಗೆಯುವ ಕಾರ್ಯ ಮಾಡಲಾಗಿದೆ.
ರಾಜೇಶ್ ರಾವ್ ಕುಕ್ಕುಂದೂರು ಗ್ರಾ.ಪಂ. ಉಪಾಧ್ಯಕ್ಷ. ಸೇತುವೆ ನಿರ್ಮಾಣವಾಗಲಿ
ರಸ್ತೆಗೆ ಸರಿಯಾಗಿ ಅಗಲವಾದ ಸೇತುವೆ ನಿರ್ಮಾಣಗೊಂಡರೆ ಸಾಕಷ್ಟು ರೀತಿಯಲ್ಲಿ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಈ ಭಾಗದಲ್ಲಿ ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ವಾಹನಗಳು ತೆರಳುತ್ತವೆ. ರಸ್ತೆ ಅಗಲವಾಗಿದ್ದು, ಸೇತುವೆ ಕಿರಿದಾಗಿದೆ. ಹೀಗಾಗಿ ಕೆಲವೊಂದು ಅಪಘಾತಗಳೂ ಕೂಡ ಹೀಗಾಗಲೇ ಸಂಭವಿಸಿದೆ.
ಸಂದೀಪ್ ಪೂಜಾರಿ, ಪರಪ್ಪು. ಜಿವೇಂದ್ರ ಶೆಟ್ಟಿ