Advertisement
ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಭದ್ರವಾದ ಕೇಂದ್ರವನ್ನು ನಿರ್ಮಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮ ಪಂಚಾಯತ್ ಈ ಅನುದಾನ ಬಳಸಿಕೊಂಡು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮಾದರಿ ಆಗಿದೆ.
Related Articles
Advertisement
ಗ್ರಾಮೀಣ ಭಾಗದ ಮಳೆಯರನ್ನು ಸ್ವ-ಸಹಾಯ ಸಂಘ ಮತ್ತು ಅವುಗಳ ಒಕ್ಕೂಟಗಳ ಮೂಲಕ ಸಂಘಟಿಸಿ, ಆರ್ಥಿಕ, ಸಾಮಾಜಿಕ ಮತ್ತು ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸಿ ಅಗತ್ಯ ಜೀವನೋಪಾಯ ಕಂಡುಕೊಳ್ಳುವಂತೆ ರೂಪಿಸುವುದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಂತೆ ಯೋಜನೆಯಡಿ ಜಾರಿಗೊಳಿಸುವ ವಿವಿಧ ಅಭಿಯಾನ, ತರಬೇತಿ, ಮಾಸಿಕ ಸಭೆಗಳನ್ನು ಕಾಲ ಕಾಲಕ್ಕೆ ಸಂಜೀವಿನಿ ಒಕ್ಕೂಟದ ಕೇಂದ್ರದಲ್ಲಿ ಆಯೋಜಿಸಿ ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸುವತ್ತ ಶ್ರಮಿಸುತ್ತಿದೆ. ಪೂರಕವಾಗಿ ಈ ಘಟಕ ಸಹಕಾರಿಯಾಗಿದೆ ಎನ್ನುವುದು ಪಿಡಿಒ ಪ್ರಮೀಳಾ ನಾಯಕ್ ಅವರ ಅಭಿಪ್ರಾಯ.
ಬೇರೆಡೆ ಇದ್ದರೂ ಕಾರ್ಯ ಆರಂಭ ಇಲ್ಲೇ ಮೊದಲುಜಿಲ್ಲಾದ್ಯಂತ ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ವಿವಿಧ ಚಟುವಟಿಕೆ ನಡೆಸುತ್ತಿದ್ದಾರೆ. ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಮಾರುಕಟ್ಟೆ, ಸಾಲ ಮರುಪಾವತಿ ಇತರೆ ಚಟುವಟಿಕೆ ನಡೆಸಲು ಅವರಿಗೆ ಸೂಕ್ತ ಸ್ವಂತ ಕಚೇರಿ, ಘಟಕಗಳ ಆವಶ್ಯಕವಿದೆ. ಜಿಲ್ಲೆಯ ವಿವಿಧ ತಾಲೂಕಗಳ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಲವೆಡೆ ಘಟಕಗಳು ತೆರೆದು ಉದ್ಘಾಟನೆಗೆ ಸಿದ್ಧವಾಗಿದ್ದರೆ, ಇನ್ನು ಕೆಲವೆಡೆ ಅನುಷ್ಠಾನ ಹಂತದಲ್ಲಿದೆ. ಆದರೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದ ಮೊದಲ ಘಟಕ ಪಳ್ಳಿಯದ್ದಾಗಿದೆ. 4 ಕಡೆ ಘಟಕ ನಿರ್ಮಾಣ
ಸಂಜೀವಿನಿ ಸದಸ್ಯರಿಗೆ ಚಟುವಟಿಕೆ ನಡೆಸಲು ಸ್ವಂತ ಕಟ್ಟಡದ ಅಗತ್ಯವಿದೆ. ತಾ|ನಲ್ಲಿ ನಾಲ್ಕು ಕಡೆ ಸಂಜೀವಿನಿ ಘಟಕ ಸಿದ್ಧಪಡಿಸಲಾಗುತ್ತಿದೆ. ಪಳ್ಳಿ ಮೊದಲ ಘಟಕವಾಗಿ ಈಗಾಗಲೇ ಕಾರ್ಯಾರಂಭ ಮಾಡಿದೆ. –ಗುರುದತ್ತ್, ಇ.ಒ., ಕಾರ್ಕಳ ತಾ.ಪಂ ಚಟುವಟಿಕೆಗೆ ಅನುಕೂಲ
ಸಂಘದ ಚಟುವಟಿಕೆಗೆ ಬಹಳಷ್ಟು ಅನುಕೂಲವಾಗಿದೆ. ಇದುವರೆಗೂ ಪರ್ಯಾಯ ಜಾಗ ಅವಲಂಬಿಸಬೇಕಿತ್ತು. ಸ್ವಂತ ಕಟ್ಟಡವಿಲ್ಲವೆನ್ನುವ ಕೊರಗು ದೂರವಾಗಿದೆ.
-ಉಷಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ *ಬಾಲಕೃಷ್ಣ ಭೀಮಗುಳಿ