ಟೋಲ್ ಗೇಟ್-ಸುಂಕ ವಸೂಲಾತಿ ಕೇಂದ್ರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.
Advertisement
ಅಕ್ಟೋಬರ್‌ನಲ್ಲಿ ಬೆಳ್ಮಣ್ಣಿನಲ್ಲಿ ಸಾವಿರಾರು ಜನರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಶಾಂತಿಯುತ ಹೋರಾಟಕ್ಕೆ ಯಾವುದೇ ಸ್ಪಂದನೆ ಇಲ್ಲ. ಈಗ ಪೊಲೀಸ್ ಸಹಾಯದಿಂದ ಟೋಲ್ ಗೇಟ್ ನಿರ್ಮಿಸಿ ಸಾರ್ವಜನಿಕರನ್ನು ಲೂಟಿ ಮಾಡಲು ಸರಕಾರ ಮುಂದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಸಮಿತಿ ಪದಾಧಿಕಾರಿಗಳಾದ ಶಶಿಧರ ಶೆಟ್ಟಿ, ಸರ್ವಜ್ಞ ತಂತ್ರಿ, ಹರಿಪ್ರಸಾದ್ ಉಪಸ್ಥಿತರಿದ್ದರು.
27 ಕಿ.ಮೀ. ಉದ್ದದ ಈ ಹೆದ್ದಾರಿಗೆ 37 ಹಂಪ್‌ಗ್ಳನ್ನು ಹಾಕಲಾಗಿದೆ. ನಾವು ರಸ್ತೆಗೆ ಬೇರೆ ಬೇರೆ ರೀತಿಯಲ್ಲಿ ತೆರಿಗೆ ಪಾವತಿಸುತ್ತಿದ್ದೇವೆ. ಹೆಜಮಾಡಿ, ಸುರತ್ಕಲ್, ಬೆಳ್ಮಣ್ಣು ನಡುವೆ 37 ಕಿ.ಮೀ.ಗೆ ಮೂರು ಟೋಲ್ ವಸೂಲಿ ಕೇಂದ್ರ ಗಳಿವೆ. ಸುಂಕದ ಹೊರೆ ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಡಿ. 20ರಂದು ಬೆಳಗ್ಗೆ 9ಕ್ಕೆ ಬೆಳ್ಮಣ್ಣು ಬಸ್ ನಿಲ್ದಾಣದಲ್ಲಿ ಪ್ರತಿಭಟನ ಸಭೆ ಮತ್ತು ಮೆರವಣಿಗೆ ನಡೆಯಲಿದೆ. ಉದ್ಯಮಿ ಗಳು, ವರ್ತಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಬಸ್-ರಿಕ್ಷಾ-ಟ್ಯಾಕ್ಸಿ ಮಾಲಕರು, ಚಾಲಕರು, ಕೃಷಿಕರು ಬೆಂಬಲ ಸೂಚಿಸಿದ್ದಾರೆ ಎಂದು ಸುಹಾಸ್ ಹೆಗ್ಡೆ ಹೇಳಿದರು.