Advertisement

karkala-Mala; ಹೆದ್ದಾರಿ ಪ್ರಾಧಿಕಾರದ ವಿರುದ್ಧ ದಾವೆ

11:47 PM Dec 23, 2023 | Team Udayavani |

ಕಾರ್ಕಳ: ಕಾರ್ಕಳ-ಮಾಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುತ್ತಿದ್ದು, ಹೆದ್ದಾರಿ ಬದಿಯ ಮರಗಳನ್ನು ತೆರವುಗೊಳಿಸಲಾಗಿದೆ. ಕಾಮಗಾರಿ ವೇಳೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕುಂಟಿಬೈಲು ಕಾಮತ್‌ ಕುಟಿಂಬಿಕರ ನಾಗಬನಕ್ಕೆ ಸಮಸ್ಯೆಯಾದ ಬಗ್ಗೆ ಮಿಯ್ಯಾರು ಸತೀಶ್‌ ನಾಯಕ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ದಾವೆ ಹೂಡಿದ್ದಾರೆ.

Advertisement

ಹಿರಿಯರಿಂದ ಪರಂಪರಾಗತವಾಗಿ ಬಂದಿರುವ ಏಕೈಕ ಕೃಷಿ ಭೂಮಿ ಇದಾಗಿದ್ದು, ಪ್ರಸಕ್ತ ಈ ಜಮೀನು, ಇಕ್ಕೆಲದಲ್ಲಿ ಅಂದರೆ ಕಾರ್ಕಳ-ಕುದುರೆಮುಖ ಹಾಗೂ ಹೊಸದಾಗಿ ಸಿದ್ಧಗೊಳ್ಳುತ್ತಿರುವ ಕಾರ್ಕಳ-ಮಾಳ ರಾ.ಹೆದ್ದಾರಿ 169ನ ನಟ್ಟನಡುವೆ ನಾಗಬನ ಸಿಲುಕಿಕೊಂಡಿದೆ.

ಸಮಸ್ಯೆಯನ್ನು ತಿಳಿಗೊಳಿಸಲು ಈ ವರ್ಷದ ಫೆಬ್ರವರಿಯಿಂದ ನವೆಂಬರ್‌ ತನಕ ಇಲಾಖೆಗೆ ಅನೇಕ ಬಾರಿ ಲೀಗಲ್‌ ನೋಟಿಸ್‌ ನೀಡಿದರೂ, ಸ್ಪಂದಿಸದೆ ಕಳೆದ ತಿಂಗಳು ಏಕಪಕ್ಷೀಯವಾಗಿ ಜಮೀನಿನಲ್ಲಿರುವ ಬೃಹತ್‌ ಗಾತ್ರದ ಮರವನ್ನು ತೆರವುಗೊಳಿಸಿದ್ದಾರೆ.

ಕಾನೂನು ಬಾಹಿರ ಕೃತ್ಯಕ್ಕೆ ನೊಂದ ದೂರುದಾರ ಮಿಯ್ಯಾರ್‌ ಸತೀಶ ಕಾಮತ್‌ ಅವರು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧ ದಾವೆ ದಾಖಲಿಸಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next