Advertisement

ವಿಸ್ತರಣೆಯ ಕಾರ್ಕಳ ಉತ್ಸವ ಇಂದು ಸಂಪನ್ನ

12:51 PM Mar 22, 2022 | Team Udayavani |

ಕಾರ್ಕಳ: ಭಾಷೆ, ಕಲೆ, ಸಂಸ್ಕೃತಿಗಳ ಸಮಾಗಮದ ಕಾರ್ಕಳ ಉತ್ಸವ ಮಾ.20ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯ ಕಂಡಿತು . ವಿದ್ಯುತ್‌ ದೀಪಾಲಂಕಾರ, ವಸ್ತು ಪ್ರದರ್ಶನ, ಆಹಾರೋತ್ಸವ, ಬೋಟಿಂಗ್‌ ಇವುಗಳನ್ನು ಮಾ.22ರ ವರೆಗೆ ವಿಸ್ತರಿಸಲಾಗಿದ್ದು, ಇಂದು ಕಾರ್ಕಳ ಉತ್ಸವ ಮುಕ್ತಾಯ ಸಂಪನ್ನಗೊಳ್ಳಲಿದೆ.

Advertisement

ಉತ್ಸವ ಆರಂಭದ ದಿನಗಳಿಂದ ಮುಕ್ತಾಯಗೊಳ್ಳುವ ಮಾ.20ರ ತನಕವೂ ಪ್ರತಿನಿತ್ಯ ಸಹಸ್ರಾರು ಮಂದಿ ಭೇಟಿ ನೀಡುತ್ತಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದುದರಿಂದ ಜನರ ಉತ್ಸಾಹ ಹೆಚ್ಚಿದ ಕಾರಣಕ್ಕೆ ಸಾರ್ವಜನಿಕರ ಒತ್ತಾಯದಂತೆ ಸಾಂಸ್ಕೃತಿಕ ಉತ್ಸವ ಹೊರತು ಪಡಿಸಿ ಉಳಿದೆಲ್ಲವನ್ನು ಮುಂದುವರಿಸಲಾಗಿತ್ತು. ಈ ಹತ್ತು ದಿನಗಳಲ್ಲಿ ಉತ್ಸವಕ್ಕೆ ಬರಲಾಗದೆ ಉಳಿದವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದಲೂ ಮುಂದುವರೆಸಲಾಗಿತ್ತು. ಸೋಮವಾರ ಕೂಡ ವಸ್ತು ಪ್ರದರ್ಶನ, ಬೋಟಿಂಗ್‌ ಸ್ಥಳ, ಆಹಾರೋತ್ಸವ ಮಳಿಗೆಗಳಲ್ಲಿ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಕಂಡು ಬಂದರು.

ಫ‌ಲಪುಷ್ಪ, ಕೃಷಿ ಪ್ರದರ್ಶನ ಇಂದು ಕೊನೆ ಸ್ವರಾಜ್‌ ಮೈದಾನದ ಬಳಿ ವಿಶೇಷವಾಗಿ ಪುಷ್ಪ ಪ್ರದರ್ಶನ, ಕೃಷಿ ವಸ್ತು ಪ್ರದರ್ಶನಕ್ಕೆ ನೂರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರದರ್ಶನ ಮಾ. 22 (ಇಂದು) ಕೊನೆಯ ದಿನವಾಗಿದೆ. ಮಾ. 20ರಂದು ರಾತ್ರಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ, ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ಕರುನಾಡ ವೈಭವ ಕಾರ್ಯಕ್ರಮ ನಡೆಯುವುದರೊಂದಿಗೆ ಕಾರ್ಕಳ ಉತ್ಸವ 2022ರ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯ ಕಂಡವು.

Advertisement

Udayavani is now on Telegram. Click here to join our channel and stay updated with the latest news.

Next