Advertisement
2ತಿಂಗಳ ಹಿಂದಷ್ಟೇ ಕಾರ್ಕಳ ಪೇಟೆಯಲ್ಲಿ ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಮತ್ತೂಂದು ಪ್ರಕರಣ ಸಂಭವಿಸಿದೆ. ಪೊಲೀಸರು ಎರಡೂ ಪ್ರಕರಣ ಗಳಲ್ಲಿ ಆರೋಪಿಗಳನ್ನು ಬಂಧಿಸಿ ದ್ದಾರೆ. ಆದರೆ, ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಕಳ್ಳತನ ಮಾಡುವರು ಸೆಕ್ಯೂರಿಟಿ ಇಲ್ಲದ, ಒಬ್ಬರೇ ಇರುವ ಸಣ್ಣಪುಟ್ಟ ಶಾಪ್ಗ್ಳನ್ನು ಗಮನಿಸುತ್ತಾರೆ. ಹೇಗಾದರೂ ಆಭರಣಗಳನ್ನು ತೆಗೆದುಕೊಂಡು ಸುಲಭದಲ್ಲಿ ಪರಾರಿಯಾಗಬಹುದು ಎಂಬ ಉದ್ದೇಶ ಇವರದ್ದಾಗಿರುತ್ತದೆ. ಗುಣಮಟ್ಟದ ಸಿಸಿಟಿವಿ ಕೆಮರಾ ವ್ಯವಸ್ಥೆ ಸಹಿತ ಅಗತ್ಯ ಸುರಕ್ಷತಾ ಕ್ರಮವನ್ನು ಚಿನ್ನಾಭರಣ ಮಾರಾಟಗಾರರು ಪಾಲಿಸಬೇಕು. ಎಲ್ಲ ಚಿನ್ನಾಭರಣ ವ್ಯಾಪಾರಿಗಳಿಗೆ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು. ಘಟನೆ ನಡೆದ ಬಳಿಕ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
-ಅರವಿಂದ್ ಕಲಗುಜ್ಜಿ,ಡಿವೈಎಸ್ಪಿ ಕಾರ್ಕಳ
Related Articles
ಕಾರ್ಕಳದಲ್ಲಿ ಜರಗಿದ ಎರಡು ಘಟನೆಗಳಲ್ಲಿಯೂ ಮಹಿಳೆ, ಯುವತಿ ಒಬ್ಬರೇ ಇದ್ದ ಶಾಪ್ಗೆ ಕಳ್ಳರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಎಲ್ಲ ಆಯಾಮಗಳಿಂದಲೂ ತಿಳಿದುಕೊಂಡೇ ಕಳ್ಳರು ಇಂಥ ಕೃತ್ಯ ನಡೆಸಿರುವ ಸಾಧ್ಯತೆ ಇರುತ್ತದೆ. ಇಂಥ ಘಟನೆಗಳಿಂದ ಕೆಲಕಾಲ ವ್ಯಾಪಾರಿಗಳಲ್ಲಿ ಆತಂಕವಿರುತ್ತದೆ. ಪೊಲೀಸ್ ಇಲಾಖೆ ತತ್ಕ್ಷಣ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಜುವೆಲ್ಲರಿ ಶಾಪ್ ನಡೆಸುವರು ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.
-ಮುಹಮ್ಮದ್ ಅಸ್ಲಾಮ, ಅಧ್ಯಕ್ಷರು, ಜುವೆಲ್ಲರ್ಸ್ ಅಸೋಸಿಯೇಶನ್ ಕಾರ್ಕಳ
Advertisement
-ಅವಿನ್ ಶೆಟ್ಟಿ