Advertisement

ಕುಂದಗೋಳದಲ್ಲಿ ಸಂಭ್ರಮದ ಕರಿಬಂಡಿ ಉತ್ಸವ

05:19 PM Jun 28, 2018 | |

ಕುಂದಗೋಳ: ಜಯ ಬ್ರಹ್ಮಲಿಂಗೋಮ, ನರಸಿಂಹಲಿಂಗೋಮ ಎಂಬ ಸಾವಿರಾರು ಭಕ್ತರ ಹರ್ಷೋದ್ಘಾರ ಹಾಗೂ ಜಯಘೋಷಗಳ ಮಧ್ಯೆ ಕರಿಬಂಡಿ ಉತ್ಸವ ಪಟ್ಟಣದಲ್ಲಿ ಬುಧವಾರ ಸಂಭ್ರಮದಿಂದ ಜರುಗಿತು. ಮುಂಜಾನೆ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿಕೊಂಡು ವಾದ್ಯವೈಭವಗಳೊಂದಿಗೆ ಮೆರವಣಿಗೆ ಮೂಲಕ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಂಜೆ ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಲ್ಯಾಣಪುರದ ಬಸವಣ್ಣಜ್ಜನವರು ಪಟ್ಟಣದ ಬಿಳೆಬಾಳ ಮನೆತನದ ಹಾಗೂ ಅಲ್ಲಾಪೂರ ಮನೆತನದ ಪರಂಪರಾಗತ ಕರಿ ಬಂಡಿಗಳಿಗೆ ಪೂಜಿಸುವ ಮೂಲಕ ಚಾಲನೆ ನೀಡಿದರು.

Advertisement

ಪೂಜೆಗೊಂಡ ಬಂಡಿಗಳು ಬ್ರಹ್ಮಲಿಂಗೇಶ್ವರ ಗುಡಿಗೆ ಆಗಮಿಸಿ ಪ್ರದಕ್ಷಿಣೆ ಹಾಕಿದವು. ನಂತರ ವೀರಗಾರರ ಮನೆಗೆ ತೆರಳಿ 14 ಜನ ವೀರಗಾರರನ್ನು ಬಂಡಿಯಲ್ಲಿ ಮೆರವಣಿಗೆ ಮೂಲಕ ಗುಡಿಗೆ ಕರೆತರುವ ದೃಶ್ಯ ನೋಡುಗರನ್ನು ಭಯ-ಭಕ್ತಿಯಲ್ಲಿ ತೇಲಿಸಿತು. ಭಕ್ತರು ಬ್ರಹ್ಮದೇವರಿಗೆ ದೀಡ ನಮಸ್ಕಾರ, ನೈವೇದ್ಯ, ಹಣ್ಣು, ಕಾಯಿ ಕರ್ಪುರಗಳನ್ನು ಸಲ್ಲಿಸುವ ಮೂಲಕ ಕಾರಹುಣ್ಣಿಮೆ ಕರಿಬಂಡಿ ಉತ್ಸವಕ್ಕೆ ಮೆರುಗು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next