Advertisement
ಶ್ರೀಚಕ್ರಪೀಠ ಸುರಪೂಜಿತೆ ರಾಜ ರಾಜೇಶ್ವರಿಗೆ ಅತಿ ಪ್ರಿಯವೆನಿಸಿದ ಸಿಹಿಭಕ್ಷ್ಯ ತಯಾರಿಕೆಗೆ ಅನ್ನಪೂರ್ಣ ಭೋಜನಾಲಯದಲ್ಲಿ ಪಾಕತಜ್ಞ ಪ್ರಸಾದ್ ಸೋಮಯಾಜಿ ನೇತೃತ್ವದಲ್ಲಿ ಅರ್ಚಕ ಅನೀಶ್ ಆಚಾರ್ಯರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಶ್ರೀ ರಮಾನಂದ ಗುರೂಜಿ ಸಾಂಕೇತಿಕವಾಗಿ ಚಾಲನೆ ನೀಡಿದರು.
ಕ್ಷೇತ್ರದಲ್ಲಿ 10 ದಿನಗಳ ಕಾಲ ನೆರವೇರಲಿರುವ ನವರಾತ್ರಿ ಮಹೋತ್ಸವ ದ ನಿರಂತರ ಅನ್ನಸಂತರ್ಪಣೆಗೆ ಊರಹಾಗೂ ಪರವೂರ ಭಕ್ತರಿಂದ ಬಂದ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ದಾನಿಗಳಾದ ಶಿವ ಮೊಗ್ಗದ ವಿಶ್ವನಾಥ್, ಲಲಿತಾ ದಂಪತಿ, ಉಡುಪಿಯ ವಿವೇಕ್ ರಾವ್, ನಳಿನಿ ದಂಪತಿ ಹೊರೆಕಾಣಿಕೆಯ ನೇತೃತ್ವ ವಹಿಸಿದ್ದರು. ಸಮರ್ಪಣೆಗೆ ಬೇಕಾದ ದಿನಸಿ ಸಾಮಗ್ರಿಗಳು, ತರಕಾರಿಗಳನ್ನು ಪೂಜಿಸಿ ಅನ್ನಪೂರ್ಣೆಯನ್ನು ಪ್ರಾರ್ಥಿಸಲಾಯಿತು.
Related Articles
ಕ್ಷೇತ್ರದಲ್ಲಿ ಬುಧವಾರ ಸಂಜೆ ಗಣೇಶ್ ಸರಳಾಯರ ನೇತೃತ್ವದಲ್ಲಿ ವೇ| ಮೂ| ಕೊಲಕಾಡಿ ವಾದಿರಾಜ ಉಪಾಧ್ಯಾಯರು ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮಹೂರ್ತ ಉಗ್ರಾಣ ಮುಹೂರ್ತ, ತರಕಾರಿ ಮುಹೂರ್ತಗಳನ್ನು ನೆರವೇರಿಸಿದರು. ಕ್ಷೇತ್ರ ಹಾಗೂ ಯಾಗ ಮಂಟಪದಲ್ಲಿ ವಾಸ್ತು ಹೋಮ, ಪ್ರಾಕಾರ ಬಲಿ, ಪ್ರಸಾದ ಶುದ್ಧಿ, ಮಂಟಪ ಸಂಸ್ಕಾರ ಪ್ರಕ್ರಿಯೆ ಹಾಗೂ ರಾಕ್ಷೊಘ್ನಾದಿ ಪ್ರಕ್ರಿಯೆಗಳು ನೆರವೇರಿತು. ನಿರಂತರ ಹತ್ತು ದಿನಗಳ ಕಾಲ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ಶ್ರೀ ಲಲಿತಾ ಸಹಸ್ರ ಕದಳೀಯಾಗ, ತ್ರಿಲೋಕೇಶ್ವರಿ ಮಹಾಯಾಗ, ಲಕ್ಷ್ಮೀ ಸಹಸ್ರನಾಮ ಯಾಗ, ಗಾಯತ್ರಿ ಮಂತ್ರ ಮಹಾಯಾಗ, ನಿರಂತರ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ.
Advertisement