ಕಾಸರಗೋಡು: ಕಲ್ಪ ವೃಕ್ಷ ಎಂದೇ ಕರೆಸಿಕೊಂಡಿರುವ ತೆಂಗು ಅಭಿವೃದ್ಧಿ ಗುರಿಯಾಗಿರಿಸಿಕೊಂಡು ಕೇರಳ ಸರಕಾರ ಜಾರಿಗೊಳಿಸುತ್ತಿರುವ “ಕೇರ ಗ್ರಾಮ’ (ತೆಂಗು ಗ್ರಾಮ) ಯೋಜನೆಯನ್ನು ಕಾಸರಗೋಡು ಜಿಲ್ಲೆಯ ಬದಿಯಡ್ಕ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ.
ಕಳೆದ ವರ್ಷ ರಾಜ್ಯದ 44 ಗ್ರಾಮ ಪಂಚಾಯತ್‌ಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಿಂದ ತೆಂಗು ಬೆಳೆ ಇಳುವರಿ ಅಧಿಕವಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಗ್ರಾಮ ಪಂಚಾಯತ್‌ಗಳಿಗೆ ವಿಸ್ತರಿಸಲು ತೀರ್ಮಾನಿಸಿದ್ದು, ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಬದಿಯಡ್ಕ ಮತ್ತು ಕಯ್ಯೂರು – ಚೀಮೇನಿ ಗ್ರಾಮ ಪಂಚಾಯತ್ ಅನ್ನು ಆಯ್ಕೆ ಮಾಡಿದೆ. ಪ್ರಸ್ತುತ ವರ್ಷ ಇನ್ನೂ 66 ಗ್ರಾಮ ಪಂಚಾಯತ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಿದೆ.
ತೆಂಗಿನ ಗಿಡ ನೆಡುವ ಪ್ರಕ್ರಿಯೆಯಿಂದ ಆರಂಭಿಸಿ ನೀರಾವರಿ, ಗೊಬ್ಬರ ಪ್ರಯೋಗ, ಕುಮ್ಮಾಯ ಬಳಸುವುದು, ಜೈವಿಕ ಗೊಬ್ಬರ, ಕೆಟ್ಟು ಹೋದ ಮರಗಳನ್ನು ಕಡಿದುರುಳಿಸಿ ಹೊಸ ಗಿಡಗಳನ್ನು ನೆಡುವುದು, ತೆಂಗು ಮರವೇರುವ ಯಂತ್ರ ಅಭಿವೃದ್ಧಿ, ಕಾಂಪೋಸ್ಟ್ ಯೂನಿಟ್ ಆರಂಭಿಸುವುದು, ತೆಂಗಿನ ಹುರಿಹಗ್ಗ ತಯಾರಿ ಮೊದಲಾದವುಗಳಿಗೆ ಈ ಯೋಜನೆಯಲ್ಲಿ ಅನುದಾನ ನೀಡಲಾಗುವುದು. ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ 625 ಎಕರೆ ಸ್ಥಳ ಯೋಜನೆಗೆ ಈ ಪ್ರದೇಶದಲ್ಲಿ 43,750 ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ ಘಟಕಗಳಿಗೆ 25 ಲಕ್ಷ ರೂಪಾಯಿ ವರೆಗೆ ಮಂಜೂರು ಮಾಡಲಾಗುವುದು.
ಈ ಮಹತ್ವದ ಯೋಜನೆಗೆ ಕೃಷಿ ಇಲಾಖೆ 97.67 ಲಕ್ಷ ರೂ. ಮಂಜೂರು ಮಾಡಿದೆ. 22.5 ಲಕ್ಷ ರೂ. ಗ್ರಾಮ ಪಂಚಾಯತ್ ವಹಿಸಿಕೊಳ್ಳಬೇಕು. ಕಳೆದ ವರ್ಷ ಪ್ರತಿಯೊಂದು ಪಂಚಾಯತ್‌ಗಳಿಗೆ 75 ಲಕ್ಷ ರೂ. ನೀಡಲಾಗಿತ್ತು.
ತಿರುವನಂತಪುರ ಜಿಲ್ಲೆಯ ಕರವಾರಂ, ತಿರುವಲ್ಲ, ಉಳಮಲಯ್ಕಲ್, ಕೊಲ್ಲಂ ಜಿಲ್ಲೆಯ ಮೆಲಿಲ, ಪನ್ಮನ, ಮಯ್ಯನಾಡ್, ತೊಡಿಯೂರು, ಶಾಸ್ತೊÅàಂಗೋಡು, ಕರಿಪ್ರ, ವೆಸ್ಟ್ ಕಲ್ಲಡ, ಚಿರಕರ, ಆಲಪ್ಪುಳ ಜಿಲ್ಲೆಯ ಪುನ್ನಪ್ರ ನೋರ್ತ್, ಮಾರಾರಿಕುಳಂ ನೋರ್ತ್, ಮುದುಕುಳಂ, ವಯಲಾರ್, ಚೆರಿನಾಡ್, ಕೋಟ್ಟಯಂ ಜಿಲ್ಲೆಯ ತಲಯಾಳಂ, ಕುಟ್ಟಿಕಲ್, ಎರ್ನಾಕುಳಂ ಜಿಲ್ಲೆಯ ಮಲಯಾಟ್ಟೂರು, ನೀಲೇಶ್ವರ, ಪಾಯಿಪ್ರ, ಕುತ್ತಾಟ್ಟುಕುಳಂ, ತೃಶ್ಶೂರು ಜಿಲ್ಲೆಯ ಪರಿಯಾರಂ, ಕೋಡಶೆÏàರಿ, ವೆಂಕಿಟೆಂಗ್, ಎಡತುರ್ತಿ, ಪರಪ್ಪಕ್ಕರ, ಕುನ್ನಂಕುಳಂ, ನಡತ್ತರ, ಮಾಟ್ಟೂತ್ತೂರು, ಪಾಲಾ^ಟ್ ಜಿಲ್ಲೆಯ ಕಾಂಞಿರಪ್ಪುಳ, ಕಾರಕುಳಿ, ಎರಿಮಾಯೂರ್, ಮುತಲಮಡ, ಆರಂಗನಾಡಿ, ಕೊಪ್ಪ, ಪುದುಶೆÏàರಿ, ಅಲನಲ್ಲೂರು, ಮಲಪುರ ಜಿಲ್ಲೆಯ ಪೆರುವಳ್ಳೂರು, ಎಡವಣ್ಣ, ತಾಳೆಕೋಡ್, ಇರಿಂಬಿಳಿಯಂ, ವೆಳಿಯಂಗೋಡು, ತಲಕಾಡ್, ವಂಡೂರು, ಎಡಪ್ಪಾಲ್, ಚೆರುಕಾವ್, ಪಾಂಡಿಕೋಡ್, ಅಂಗಾಡಿಪುರಂ, ಆನಕಯಂ, ಚಾಲಿಯರ್, ಕಲ್ಲಿಕೋಟೆ ಜಿಲ್ಲೆಯ ಚೆರುವಣ್ಣೂರು, ವೆಳ, ಬಾಲುಶೆÏàರಿ, ಕಟ್ಟಿಪ್ಪಾರ, ಮುಡಾಡಿ, ವಾಲಂ, ನನ್ಮಂಡ, ಪೆರುಮಣ್ಣ, ನೊಚ್ಚೋಡ್, ಕಾಯಕೋಡಿ, ಕಣ್ಣೂರು ಜಿಲ್ಲೆಯ ತ್ಯಪಂಗೊಟ್ಟೂರು, ಕಾಂಕೋಲ್, ಆಲಪಡಂಬ, ಪಾಯಂ, ಎಳಯವೂರು ಹೀಗೆ 66 ಪಂಚಾಯತ್‌ಗಳಲ್ಲಿ ಕೇರ ಗ್ರಾಮ ಯೋಜನೆಯನ್ನು ಜಾರಿಗೊಳಿಸಲಾಗುವುದು.