Advertisement

ಹುನಗುಂದದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ-ಮನವಿ

10:59 AM Jun 09, 2020 | Suhan S |

ಹುನಗುಂದ: ಕೋವಿಡ್ ವೈರಸ್‌ ಹಾವಳಿ ರಾಜ್ಯದಲ್ಲಿ ಹೆಚ್ಚಿದ್ದು, ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳ ಆರಂಭ ಮುಂದೂಡಬೇಕು ಹಾಗೂ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಯವರು ಪಡೆಯುವ ಡೊನೇಶನ್‌ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಸೋಮವಾರ ತಹಶೀಲ್ದಾರ್‌ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿತ್ತು.

Advertisement

ಕರವೇ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿತು. ಬಳಿಕ ಕರವೆ ತಾಲೂಕಾ ಅಧ್ಯಕ್ಷ ರಮಜಾನ್‌ ನದಾಫ್‌ ಮಾತನಾಡಿ, ವಿಶ್ವವೇ ಮಹಾಮಾರಿ ಕೊರೊನಾ ಬೀತಿಗೆ ತಲ್ಲಣಗೊಂಡಿದೆ. ನಿಯಂತ್ರಣಕ್ಕೆ ಬರುವ ಮುಂಚೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಒತ್ತಾಯಕ್ಕೆ ಮಣಿದು ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಚಿಂತನೆ ನಡೆಸಿರುವುದು ಅವೈಜ್ಞಾನಿಕ ಮತ್ತು ಅಪ್ರಬುದ್ಧ ಚಿಂತನೆಯಾಗಿದೆ. ಇದು ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕಾದ ಮಕ್ಕಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಶಾಲಾ ಕಾಲೇಜು ಆರಂಭದ ಚಿಂತನೆಯನ್ನು ಜುಲೈ ಅಂತ್ಯದವರೆಗೆ ಮುಂದೂಡಬೇಕು. ಶಾಲಾ ಪ್ರವೇಶಾತಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆ ಪಡೆದುಕೊಳ್ಳುತ್ತಿರುವ ಡೊನೇಶನ್‌ ಹಾವಳಿ ತಪ್ಪಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ನಗರ ಘಟಕದ ಅಧ್ಯಕ್ಷ ಶರಣು ಗಾಣಿಗೇರ ಮಾತನಾಡಿದರು. ಈರಣ್ಣ ಬಡಿಗೇರ, ರೋಹಿತ ಬಾರಕೇರ, ಚಂದ್ರಶೇಖರ ಹುನಗುಂದ, ಬಾಬು ವಾಲಿಕಾರ, ತಮ್ಮಣ್ಣ ಸೂಡಿ, ಶರಣಪ್ಪ ಕುರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next