Advertisement

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ ಸವಾರರು ಸ್ಥಳದಲ್ಲೇ ಸಾವು

10:51 PM Oct 22, 2020 | mahesh |

ಕಾರವಾರ: ರಾಷ್ಟ್ರೀಯ ಹೆದ್ದಾರಿ 66, ಬಿಣಗಾ ಸಮೀಪ ಗುರುವಾರ ರಾತ್ರಿ ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಬೈಕ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

Advertisement

ಮೃತರನ್ನು ಮನೋಜ ರೇವಣಕರ್ (39) , ಶೃತಿ ಧನಾತೆ (19) ಎಂದು ಗುರುತಿಸಲಾಗಿದೆ. ಇವರು ಕಾರವಾರದಲ್ಲಿ ಡಾನ್ಸ್ ತರಬೇತಿ ತರಗತಿ ನಡೆಸುತ್ತಿದ್ದರು ಎನ್ನಲಾಗಿದೆ. ಮನೋಜ ಗದಗ ಮೂಲದವರು , ಶೃತಿ ಸೊಲ್ಲಾಪುರ ಮೂಲದವರು ಎನ್ನಲಾಗಿದೆ.‌

ಕಾರವಾರದಿಂದ ಅಂಕೋಲಾ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಅತೀಯಾದ ಮಳೆಯಲ್ಲಿ ಬೈಕ್ ಚಲಾಯಿಸುತ್ತಿದ್ದುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಳೆಯಲ್ಲಿ ಎದುರಿನ ವಾಹನ ಕಾಣದೆ ಟ್ಯಾಂಕರ್ , ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಕಾರವಾರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next