Advertisement

ಪ್ರೀತಿ, ವಿಶ್ವಾಸದಿಂದ ಬದುಕು ಸಾರ್ಥಕ : ಗಣೇಶ್‌ ರಾವ್‌

06:40 AM Mar 11, 2018 | Team Udayavani |

ಮಂಗಳೂರು: ಮಾನವೀಯತೆ ಹಾಗೂ ನೈತಿಕತೆಗೆ ಹೆಸರುವಾಸಿಯಾದ ನಮ್ಮ ದೇಶದ ಈ ಭವ್ಯ ಪರಂಪರೆಯನ್ನು ಎತ್ತಿ ಹಿಡಿದು, ಪರಸ್ಪರ ಗೌರವ ಮತ್ತು ಪ್ರೀತಿ, ವಿಶ್ವಾಸದೊಂದಿಗೆ ಜೀವಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ. ಆರ್‌. ಎಜುಕೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಹೇಳಿದರು.

Advertisement

ಕರಾವಳಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಶನಿವಾರ ಆಯೋಜಿಸಲಾದ ಅಂತರ್‌ ಕಾಲೇಜು ಸಾಂಸ್ಕೃತಿಕ ಹಬ್ಬ ಕೈಜನ್‌-2018ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಉನ್ನತ ಪದವಿಗಳನ್ನು ಹೊಂದಿದವರು ಸರಳತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿದರೆ ಎಲ್ಲರ ಮೆಚ್ಚುಗೆ ಗಳಿಸಲು ಸಾಧ್ಯ. ವಿದ್ಯಾರ್ಥಿದೆಸೆಯಲ್ಲೇ ಸ್ಪಷ್ಟಗುರಿ, ದೃಢ ತೀರ್ಮಾನ ಹಾಗೂ ಶತಪ್ರಯತ್ನದ ಗುಣಗಳಿದ್ದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ಮುನ್ನಡೆಯಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ವಿಧಾನಸಭಾ ಉಪಸಭಾಪತಿ ಎನ್‌. ಯೋಗೀಶ್‌ ಭಟ್‌ ಮಾತನಾಡಿ, ಭಗವಂತನಲ್ಲಿ ವಿಶ್ವಾಸ, ಭರವಸೆ ಇಡುವಂತೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಆತ್ಮವಿಶ್ವಾಸ ಹಾಗೂ
ಭರವಸೆ ಹೊಂದಿದರೆ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ. ವಿದ್ಯಾರ್ಥಿಗಳು, ಮಹಾಪುರುಷರ ಹಾಗೂ ಸಾಧ
ಕರ ಜೀವನ ಚರಿತ್ರೆಗಳನ್ನು ಅಧ್ಯಯನ ನಡೆಸಿ ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿ ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಿ ಬದುಕಬೇಕು ಎಂದು ಕರೆ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಟ್ರಸ್ಟಿ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್‌ ಮಿಜಾರು ಅವರು ಮಾತನಾಡಿ, ಭಾರತ ಅತೀ ಹೆಚ್ಚು ಯುವಕರಿರುವ ದೇಶ, ಯುವಕರಿಂದ ಸಮಾಜ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಆದ್ದರಿಂದ ಯುವಕರು ಪ್ರತಿಭೆ ಹಾಗೂ ಚಾರಿತ್ರ್ಯದ ಮೂಲಕ ದೇಶಕ್ಕೆ ಕೊಡುಗೆಯನ್ನು ನೀಡುವವರಾಗಬೇಕು. ಕರಾವಳಿ ಕಾಲೇಜಿನ ಕೈಜನ್‌ ಪ್ರತಿಭೋತ್ಸವವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಹಾಗೂ ರಚನಾತ್ಮಕವಾಗಿ ಬಳಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.
ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ ಜಿ. ರಾವ್‌, ಕರಾವಳಿ ಕಾಲೇಜುಗಳ ಸಮೂಹದ ಪ್ರಾಂಶುಪಾಲರು ಉಪಸ್ಥಿತರಿದ್ದರು.ಝಿಧಾ ಸ್ವಾಗತಿಸಿದರು. ರಿಹಾಮ್‌ ವಂದಿಸಿದರು. ಪ್ರಿಯಾಂಕಾ ಅವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next