Advertisement
ಕರಾವಳಿ ಬೈಪಾಸ್‌ನಿಂದ ಆದಿವುಡುಪಿ, ಪಂದುಬೆಟ್ಟು ಕಲ್ಮಾಡಿ, ಮಲ್ಪೆವರೆಗಿನ ರಸ್ತೆ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾಗಿ ಡಾಮರು ಕಂಡಿಲ್ಲ. ಕೆಲವೊಮ್ಮೆ ಅಲ್ಲಲ್ಲಿ ತೇಪೆ ಕಾಮಗಾರಿ ಮಾಡಿದ್ದರೂ ತಿಂಗಳಿಗಿಂತ ಹೆಚ್ಚು ಬಾಳಿಕೆ ಬಂದಿಲ್ಲ. ಜನರು ಅನಿವಾರ್ಯ ವಾಗಿ ಈ ರಸ್ತೆಯ ಅವಲಂಬನೆಯ ಪರಿಸ್ಥಿತಿಗೆ ಸಿಲುಕಿ ನಿತ್ಯ ಯಮಯಾತನೆ ಅನುಭವಿಸುವಂತಾಗಿದೆ.
Related Articles
Advertisement
ವಾಟರ್ ಫಿಲ್ಲಿಂಗ್
ಇಲ್ಲಿನ ರಸ್ತೆ ವಿಸ್ತರಿಸುವ ಯೋಜನೆ ಇರುವುದರಿಂದ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ. ವಿಸ್ತರಣೆ ಯೋಜನೆ ಬೇರೆ ಬೇರೆ ಕಾರಣದಿಂದ ಸ್ವಲ್ಪ ವಿಳಂಬವಾಯಿತು. ಅತೀ ಬೇಗದಲ್ಲಿ ಹೊಸ ಟೆಂಡರ್ ಕರೆಯಲಾಗುವುದು. ಸದ್ಯ ಮಳೆಗಾಲ ಆರಂಭವಾಗಿದ್ದರಿಂದ ಈ ರಸ್ತೆಗೆ ವಾಟರ್ ಫಿಲ್ ಮಾಡಿ ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗುವುದು ಎಂದು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗೆ ಇನ್ನೂ ಸಮಸ್ಯೆ ಜಾಸ್ತಿ
ಒಂದು ಕಡೆ ರಸ್ತೆ ವಿಸ್ತರಣೆಯಾಗುತ್ತದೆ ಎಂದರೆ, ಇನ್ನೊಂದಡೆ ವಿಸ್ತರಣೆಯ ಟೆಂಡರ್ ವಿಳಂಬವಾಗಿದೆ ಎಂಬ ಮಾತು ಕೇಳಿ ಬರುತ್ತದೆ.ಇನ್ನೇನು ಇಂದೋ ನಾಳೆಯೋ ಆರಂಭವಾಗಲಿದ್ದು, ಅದಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮಳೆಯ ಅಬ್ಬರಕ್ಕೆ ರಸ್ತೆ ಗತಿ ಅಧೋಗತಿ. ಒಟ್ಟಾರೆ ಈ ಮಾರ್ಗ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿದದರೂ, ರಾ. ಹೆದ್ದಾರಿಯಾದ್ದರಿಂದ ನಗರಸಭೆ ಈ ರಸ್ತೆ ಅಭಿವೃದ್ಧಿಯಲ್ಲಿ ತಲೆ ಹಾಕುತ್ತಿಲ್ಲ.
ರಸ್ತೆ ಸಂಚಾರವೇ ಹಿಂಸೆ: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವುದೇ ಹಿಂಸೆಯೆನಿಸುತ್ತದೆ. ಮಳೆ ಬರುವ ಮೊದಲು ಇರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಸಾರ್ವಜನಿಕರು ಸಂಯಮ ಕಳೆದುಕೊಂಡು ಪ್ರತಿಭಟನೆಯ ಹಾದಿ ಹಿಡಿಯುವ ಮುನ್ನ ಸಂಬಂಧಪಟ್ಟ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. -ಭುವನೇಂದ್ರ ಮೈಂದನ್, ಬಂಕೇರಕಟ್ಟ -ನಟರಾಜ್ ಮಲ್ಪೆ