Advertisement

ಹಂಸಧ್ವನಿಯಾಗಿ ಬೆಳಗಿದ ಕಾರಂತರು 

06:00 AM May 04, 2018 | |

ಮಂಗಳೂರಿನ ಚಿತ್ರ ಕಲಾ ಕ್ಷೇತ್ರಕ್ಕೆ ವೇದಿಕೆ ಕಟ್ಟಿಕೊಟ್ಟು ಕೊನೆಯವರೆಗೂ ತೆರೆಯ ಹಿಂದೆ ಇದ್ದು ತೃಪ್ತಿ ಕಂಡುಕೊಂಡ ಕಲಾವಿದ ಪಣಂಬೂರು ಪುರುಷೋತ್ತಮ ಕಾರಂತರು ಇಂದು ನಮ್ಮನ್ನಗಲಿದರೂ ಅವರು ಕಟ್ಟಿರುವ ಬಣ್ಣದ ತೋರಣ ಇನ್ನೂ ಹಸುರಾಗಿಯೇ ಹಸನಾಗಿದೆ. ಸದಾ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಇರುವ ಅವರ ಕಲಾಕೃತಿಗಳಲ್ಲೂ ತಿಳಿ ಬಣ್ಣಗಳೇ ಇದು,ª ವಿಚಾರಧಾರೆಗಳ ಸಾಕಾರ ಸಂಕಲ್ಪಗಳ ಛಾಪು ಮೂಡಿಸುತ್ತಿತ್ತು. ಹಂಸ, ನವಿಲು, ಕೊಳಲು, ಹೂ, ಮರ, ಗಿಡಗಳೆಂಬ ಚಿತ್ತವನ್ನರ‌ಳಿಸುವ ಚಿತ್ರಗಳೇ ವ್ಯಕ್ತವಾಗುತ್ತಿದ್ದು ಕಡು, ಕರಿ ಕೆಂಪು ಬಣ್ಣಗಳ ವಿಕಾರವು ಜತನವಾಗುತ್ತಿರಲಿಲ್ಲ. ವಿವೇಕಾನಂದ ಹಾಗೂ ರಾಮಕೃಷ್ಣರ ಬಹುತೇಕ ಬದುಕಿನ ಅಂಶಗಳನ್ನು ಚಿತ್ರಿಸಿದ್ದು ಅವೆಲ್ಲವೂ ಇಂದು ರಾಮಕೃಷ್ಣ ಮಠದಲ್ಲಿ ಸಂಗ್ರಹಗೊಂಡಿದ್ದು ಮಾತ್ರವಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಕಲಾಕೃತಿಗಳು ಗ್ಯಾಲರಿಯ ರೂಪದಲ್ಲಿ ಪ್ರದರ್ಶನಗೊಂಡಿರುತ್ತವೆ. ಕಾರಂತರಿಗೂ ರಾಮಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿತ್ತು. ಕಾರಂತರು ತನ್ನ ಬಿಡುವಿನ ವೇಳೆಯನ್ನು ಮಠದಲ್ಲೇ ಕಳೆಯುತ್ತಿದ್ದುದರಿಂದ ಆಧ್ಯಾತ್ಮಿಕ ಚಿಂತನೆ, ಧ್ಯಾನಗಳೊಂದಿಗೆ ಚಿತ್ರಗಳ ನಂಟು ಕೂಡಾ ಬೆಳೆದು ಬಂದಿತ್ತು. 

Advertisement

 ಮಂಗಳೂರಿನ ಮಹಾಲಸಾ ಚಿತ್ರಕಲಾ ಶಿಕ್ಷಣ ಸಂಸ್ಥೆಯ ಆರಂಭದಲ್ಲಿ ಪ್ರಾಂಶುಪಾಲರಾಗಿ ಪಿ.ಪಿ.ಕಾರಂತರು ಉದ್ಯೋಗದಲ್ಲಿದ್ದರು. ಕೋಡಿಕಲ್‌ನಲ್ಲಿ ಕಾರಂತರ ಹಂಸವು ಹಲವಾರು ಮಕ್ಕಳಿಗೆ ಚಿತ್ರ ರಚಿಸುವ ತರಬೇತಿಗೆ ಕುಟೀರವಾಗಿತ್ತು. ಉಡುಗೆ ಹಾಗೂ ಮನಸು ಸದಾ ಶ್ವೇತಮಯವಾಗಿರುತ್ತಿದ್ದುದರಿಂದ ಸೌಮ್ಯ, ಸಜ್ಜನ, ಶಾಂತಭಾವದಲ್ಲೇ ಸಮಾಜವನ್ನು ಕಂಡವರು. ವಿಶ್ವಕಲಾ ದಿನದಂದು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಚಿತಕಾಮಾನಂದಜೀ ಮಹಾರಾಜ್‌ ಮತ್ತು ಏಕಗಮ್ಯಾನಂದಜೀ ಮಹಾರಾಜ್‌ರವರ ಅಭಿಲಾಷೆಯ ಮೇರೆಗೆ ಕರಾವಳಿ ಚಿತ್ರಕಲಾ ಚಾವಡಿಯು ಕಾರಂತರನ್ನು ನೆನಪಿಸುವ ಚಿತ್ರ – ಸೂತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರಂತರ ಬದುಕಿನ ಬಗ್ಗೆ ಕಿರು ಸಾಕ್ಷ್ಯಚಿತ್ರದೊಂದಿಗೆ ಚಾವಡಿಯ 24 ಕಲಾವಿದರು ಚಿತ್ರ ಕಲಾಪ್ರದರ್ಶನವನ್ನು ಮಾಡಿರುವರು. ಕಾರಂತರ ಶಿಷ್ಯೆ ಲಲಿತಾ ಕಲ್ಕೂರವರು ಕಾರಂತರ ಬಣ್ಣದ ಬದುಕಿನ ಮೆರುಗಿನ ಸೊಬಗನ್ನು ವಿವರಿಸಿದರು. ಚಾವಡಿಯ ಅನೇಕ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. 

 ವಿಶ್ವಕಲಾ ದಿನದಂದು ಕರಾವಳಿಯ ಹಿರಿಯ ಕಲಾವಿದ ಪಿ.ಪಿ. ಕಾರಂತರನ್ನು ಸ್ಮರಿಸುವ ಮೂಲಕ ಕರಾವಳಿ ಚಿತ್ರಕಲಾ ಚಾವಡಿಯು ರಾಮಕೃಷ್ಣ ಮಠದ ಆಶಯದಲ್ಲಿ ಕರಾವಳಿಯಲ್ಲಿ ಚಿತ್ರ ಕಲಾಕ್ಷೇತ್ರಕ್ಕೆ ನೀಡಿರುವ ಕೊಡುಗೆಯಲ್ಲಿ ಹಿರಿತನದಲ್ಲಿರುವ ಕಾರಂತರನ್ನು ಶಾಶ್ವತವಾಗಿ ನೆನಪಿಸುವಂತ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದೆಂದು ತೀರ್ಮಾನಿಸಲಾಯಿತು. ಕಾರಂತರ ಬದುಕಿನ ಬಗ್ಗೆ ಪುಸ್ತಕ ಪ್ರಕಟಣೆ ಮತ್ತು ಅವರ ಕಲಾಕೃತಿಗಳಿಗೊಂದು ಗ್ಯಾಲರಿಯಾಗಬೇಕೆಂದು ಅವರ ಶಿಷ್ಯರು ಮತ್ತು ಅಭಿಮಾನಿ ಬಳಗದ ದೊಡ್ಡದೊಂದು ಕನಸು ನನಸಾಗಲಿರುವ ಬೆಳಕು ಕಾಣುತ್ತಿದೆ.

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next