Advertisement

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

09:15 AM Nov 27, 2021 | Team Udayavani |

ನವದೆಹಲಿ: ಬಜೆಟ್‍ ದರದಲ್ಲಿ ಉನ್ನತ ಗುಣಮಟ್ಟದ ಟ್ರೂ ವೈರ್ ಲೆಸ್‍ ಬಡ್‍ ಲಾಂಚ್‍ ಮಾಡುವ ಮೂಲಕ ಸಂಚಲನ ಮೂಡಿಸಿದ ಲಂಡನ್‍ ಮೂಲದ ನೂತನ ಟೆಕ್‍ ಕಂಪೆನಿ ನಥಿಂಗ್‍ ನಲ್ಲಿ ಭಾರತೀಯ ಕ್ರಿಕೆಟಿಗ ಯುವರಾಜ್‍ಸಿಂಗ್‍, ಬಾಲಿವುಡ್‍ ನಿರ್ದೇಶಕ ಕರಣ್‍ ಜೋಹರ್ ಹೂಡಿಕೆ ಮಾಡುವ ಮೂಲಕ ಕಂಪೆನಿಯ ಜೊತೆ ಕೈಜೋಡಿಸಿದ್ದಾರೆ.

Advertisement

ಒನ್‍ಪ್ಲಸ್‍ ಕಂಪೆನಿಯ ಸಹ ಸ್ಥಾಪಕ ಕಾರ್ಲ್‍ ಪೇ, ಅಲ್ಲಿಂದ ಹೊರಬಂದು ನಥಿಂಗ್‍ ಕಂಪೆನಿ ಹುಟ್ಟುಹಾಕಿದರು. ಇದರಲ್ಲಿ ಚಿಪ್‍ ಸೆಟ್‍ ಕಂಪೆನಿ ಕ್ವಾಲ್‍ ಕಂ ಕೂಡ ಹೂಡಿಕೆ ಮಾಡಿದ್ದು, ಪ್ರಸ್ತುತ ಭಾರತದ ಕರಣ್‍ ಜೋಹರ್, ಯುವರಾಜ್‍ಸಿಂಗ್‍, ಫ್ಯಾಷನ್‍ ಡಿಸೈನರ್ ಸಬ್ಯಸಾಚಿ ಮುಖರ್ಜಿ, ಡಿಜಿಟಲ್‍ ಕಂಟೆಂಟ್‍ ಕ್ರಿಯೇಟರ್ ರಣ್‍ವೀರ್ ಅಲ್ಲಾಬಾದಿಯಾ ಮತ್ತು ಸಂಗೀತ ನಿರ್ದೇಶಕ, ಗಾಯಕ ಜಸ್ಲೀನ್‍ ರಾಯಲ್‍ ಸಹ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ:ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next