Advertisement

Director: ಕರಣ್‌ ಜೋಹರ್‌ ಸಂಸ್ಥೆಯಲ್ಲಿ ಅದಾರ್‌ ಪೂನಾವಾಲ 1000 ಕೋಟಿ ರೂ. ಹೂಡಿಕೆ

10:21 PM Oct 21, 2024 | Team Udayavani |

ಮುಂಬೈ: ನಿರ್ದೇಶಕ ಕರಣ್‌ ಜೋಹರ್‌ ಒಡೆತನದ ಧರ್ಮ ಪ್ರೊಡಕ್ಷನ್ಸ್‌ನ ಅರ್ಧ ಭಾಗವನ್ನು ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಮಾಲೀಕ ಅದಾರ್‌ ಪೂನಾವಾಲ ಅವರು ಪಡೆದುಕೊಂಡಿದ್ದಾರೆ. ಇದನ್ನು ಸ್ವತಃ ನಿರ್ಮಾಪಕ ಕರಣ್‌ ಜೋಹರ್‌ ದೃಢಪಡಿಸಿದ್ದಾರೆ.

Advertisement

ಕೆಲ ದಿನಗಳಿಂದಲೂ ಧರ್ಮ ಪ್ರೊಡಕ್ಷನ್ಸ್‌ ಹೂಡಿಕೆದಾರರಿಗಾಗಿ ಹುಡುಕುತ್ತಿತ್ತು. ಸರಿಗಮ ಇಂಡಿಯಾ ಸೇರಿದಂತೆ ಹಲವು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಧರ್ಮ ಪ್ರಯತ್ನಿಸಿತ್ತು. ಅಂತಿಮವಾಗಿ ಅದಾರ್‌ ಪೂನಾವಾಲ ಅವರು ಸಂಸ್ಥೆಗೆ ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಶೇ.50ರಷ್ಟು ಸಂಸ್ಥೆಯನ್ನು ಪಡೆದುಕೊಂಡಿದ್ದಾರೆ. ಅದಾರ್‌, ಭಾರತದಲ್ಲಿ ಕೋವಿಡ್‌-19 ಲಸಿಕೆಯನ್ನು ತಯಾರು ಮಾಡಿದ ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಮಾಲೀಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next