Advertisement

ಕರೈ: ಮರ ಬಿದ್ದು ಸಂಚಾರ ಅಸ್ತವ್ಯಸ್ತ

03:45 AM Jul 06, 2017 | Team Udayavani |

ವಿಟ್ಲ : ಕೊಳ್ನಾಡು ಗ್ರಾಮದ ವಿಟ್ಲ-ಸಾಲೆತ್ತೂರು ರಸ್ತೆಯ ಕರೈಯಲ್ಲಿ  ಜು.4ರಂದು ತಡರಾತ್ರಿ ಬೃಹತ್‌ ಗಾತ್ರದ ಮರ ರಸ್ತೆಗೆ ಉರುಳಿದ ಪರಿಣಾಮ ಕೆಲಗಂಟೆಗಳ ಕಾಲ ಮುಖ್ಯ ಹೆದ್ದಾರಿಯ ಸಂಪರ್ಕ ಸ್ಥಗಿತಗೊಂಡು ಸಾರ್ವಜನಿಕರು ಪರದಾಡಿದ ಘಟನೆ ಸಂಭವಿಸಿದೆ.

Advertisement

ಮಾರ್ನಬೆ„ಲ್‌ನಿಂದ ಮಂಚಿ, ಕೊಳ್ನಾಡು ಸಾಲೆತ್ತೂರು, ವಿಟ್ಲ, ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ 18ರ ಕರೈ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಬೃಹತ್‌ ಗಾತ್ರದ ದೇವದಾರು ಮರ ತಡರಾತ್ರಿ 3 ಗಂಟೆಯ ಸುಮಾರಿಗೆ ರಸ್ತೆಗೆ ಉರುಳಿಬಿದ್ದಿತ್ತು. ವಿದ್ಯುತ್‌ ತಂತಿಗೂ ಹಾನಿಯಾಗಿತ್ತು. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಟ್ಲ, ಸಾಲೆತ್ತೂರು, ಮಂಚಿ, ಕುಕ್ಕಾಜೆ, ಮಂಗಳೂರು ಕಡೆಗೆ ತೆರಳುವ ವಾಹನಗಳು ರಸ್ತೆಯಲ್ಲಿ  ಸಾಲುಗಟ್ಟಿ ನಿಂತಿದ್ದವು. ಬಳಿಕ ಅನಿವಾರ್ಯವಾಗಿ ಬೇರೆ ರಸ್ತೆ ಮೂಲಕ ವಾಹನಗಳು ಸಂಚರಿಸಬೇಕಾಯಿತು.

ಮಾಹಿತಿ ಪಡೆದ ಸಾರ್ವಜನಿಕರು, ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಹೆಲ್ಪಿಂಗ್‌ ಹ್ಯಾಂಡ್‌ ಟ್ರಸ್ಟ್‌ ಕರೈ ಇದರ ಸದಸ್ಯರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ  ಬೆಳಗ್ಗೆ ಎಂಟು ಗಂಟೆ ವೇಳೆಗೆ  ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
 

Advertisement

Udayavani is now on Telegram. Click here to join our channel and stay updated with the latest news.

Next