Advertisement

ದಿಲ್ಲಿಗಿಂತ ಕರಾಚಿ ಸೇಫ್!

06:20 AM Oct 17, 2017 | Team Udayavani |

ಹೊಸದಿಲ್ಲಿ: ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಹೊಸದಿಲ್ಲಿಯು ವಿಶ್ವದ ಇತರ ನಗರಗಳಿಗಿಂತ ಕಳಪೆ ನಗರವಾಗಿದೆ ಎಂದು ಖ್ಯಾತ ಮಾಧ್ಯಮ ಸಂಸ್ಥೆಯಾದ ಥಾಮ್ಸನ್‌ ರಾಯrರ್ಸ್‌ ಕೈಗೊಂಡಿದ್ದ ಸಮೀಕ್ಷೆಯೊಂದು ಹೇಳಿದೆ. ಈ ವಿಚಾರದಲ್ಲಿ ದಿಲ್ಲಿಗೆ ಹೋಲಿಸಿದರೆ ಪಾಕಿಸ್ಥಾನದ ಕರಾಚಿಯೇ ಮಹಿಳೆಯರ ಪಾಲಿಗೆ ಹೆಚ್ಚು ಸೇಫ್ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. 

Advertisement

ಒಂದು ಕೋಟಿಗಿಂತಲೂ ಹೆಚ್ಚು ಜನರು ವಾಸವಾಗಿರುವ ವಿಶ್ವದ 19 ಮಹಾನಗರ ಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಥಾಮ್ಸನ್‌ ರಾಯrರ್ಸ್‌ ಸಂಸ್ಥೆ ಸಮೀಕ್ಷೆ ನಡೆ ಸಿತ್ತು. ಈ ನಗರಗಳಿಗೆ ಸಂಬಂಧಿಸಿದ ಸುಮಾರು 380 ತಜ್ಞರು ಈ ಬಗ್ಗೆ ಮತ ಚಲಾ ಯಿಸಿದ್ದರು. ಇವುಗಳ ಆಧಾರದ ಮೇಲೆ ಈ ಸಮೀಕ್ಷಾ ವರದಿಯನ್ನು ಸಂಸ್ಥೆ ತಯಾರಿಸಿದೆ. 

ಅದರಂತೆ, ಮಹಿಳೆಯರ ಅಸುರಕ್ಷತೆ ವಿಚಾರದಲ್ಲಿ ದಿಲ್ಲಿಯು ಬ್ರೆಜಿಲ್‌ನ ಸಾವೊ ಪೌಲೊ ನಗರದ ಜತೆಗೆ ಸ್ಥಾನ ಪಡೆದು ಕೊಂಡಿದೆ. ಈ ಎರಡೂ ಮಹಾನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ, ಹಲ್ಲೆಯಂಥ ಪ್ರಕರಣಗಳು ನಡೆಯುವುದು ಸರ್ವೇ ಸಾಮಾನ್ಯವೆಂದು ಹೇಳಲಾಗಿದೆ. 

ಇನ್ನು, ಒಟ್ಟಾರೆಯಾಗಿ ಮಹಿಳೆಯರ ಅಸ್ತಿತ್ವಕ್ಕೇ ಸಂಚಕಾರ ತರುವಂಥ ನಗರಗಳ ಪತ್ಯೇಕ ಪಟ್ಟಿಯನ್ನು ತಯಾರಿಸಲಾಗಿದ್ದು ಇದರಲ್ಲಿ ದಿಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಈಜಿಪ್ಟ್ನ ಕೈರೋ ಇದ್ದರೆ, ಆನಂತರದ ಎರಡು ಸ್ಥಾನ ಗಳಲ್ಲಿ ಮೆಕ್ಸಿಕೋ ಸಿಟಿ ಹಾಗೂ ಢಾಕಾ ನಗರ ಗಳಿವೆ. ಮಹಿಳೆಯರ ಸುಭದ್ರತೆ ವಿಚಾರದಲ್ಲಿ ಜಪಾನ್‌ನ ರಾಜಧಾನಿ ಟೋಕಿಯೋ ಮೊದಲ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next