Advertisement

ಕಾಪು: ಸ್ಕೂಟಿಯಲ್ಲಿದ್ದ ಚಿನ್ನಾಭರಣ ಕಳವು

12:23 AM Feb 19, 2023 | Team Udayavani |

ಕಾಪು: ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಪೆನ್ಸಿಲ್‌ ಸೆಟ್‌ ಖರೀದಿಗೆಂದು ಅಂಗಡಿಗೆ ತೆರಳಿದ್ದ ವೇಳೆ ಬೆಸುಗೆ ಹಾಕಿಸಲೆಂದು ಸ್ಕೂಟಿಯ ಢಿಕ್ಕಿಯಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಅಪರಿಚಿತರು ಕಳವುಗೈದ ಘಟನೆ ಶುಕ್ರವಾರ ಸಂಜೆ ಕೊಪ್ಪಲಂಗಡಿಯಲ್ಲಿ ನಡೆದಿದೆ.

Advertisement

ಉಡುಪಿ ಶಿವಳ್ಳಿಯ ಪೂಜಾ ಅವರು ತನ್ನ ದೊಡ್ಡಮ್ಮನ ಮಗಳಾದ ಉಷಾ ಅವರೊಂದಿಗೆ ತನ್ನ ಡಿಯೋ ಸ್ಕೂಟರ್‌ನಲ್ಲಿ ಉಡುಪಿಯಿಂದ ಕಾಪುವಿಗೆ ಬಂದು ಮೋರ್‌ ಮಳಿಗೆಯಲ್ಲಿ ಪೆನ್ಸಿಲ್‌ ಸೆಟ್‌ ತೆಗೆದುಕೊಳ್ಳುವುದಕ್ಕಾಗಿ ತೆರಳಿದ್ದರು.ಬಳಿಕ ಸ್ಟೇಷನರಿ ಅಂಗಡಿಗೆ ಹೋಗಿ ಅಲ್ಲಿ ಪೆನ್ಸಿಲ್‌ ತೆಗೆದುಕೊಂಡು ಸ್ಕೂಟರ್‌ ಇಟ್ಟಲ್ಲಿಗೆ ಹೋಗಿ ಮೊಬೈಲ್‌ ಇಡಲೆಂದು ಢಿಕ್ಕಿ ತೆರೆದಾಗ ಅದರಲ್ಲಿ ಬೆಸುಗೆ ಹಾಕಿಸುವುದಕ್ಕಾಗಿ ಇಟ್ಟಿದ್ದ ಚಿನ್ನದ ಸರ ಹಾಗೂ ಪೆಂಡೆಂಟ್‌ ಇದ್ದ ಸಣ್ಣ ಪರ್ಸ್‌ ನಾಪತ್ತೆಯಾಗಿತ್ತು. ಸುಮಾರು 16 ಗ್ರಾಂ ತೂಕದ 48 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಇದಾಗಿತ್ತು. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲು ಜಾರಿ ಬಿದ್ದು ವೃದ್ಧೆ ಸಾವು
ಕಾರ್ಕಳ: ಕಸಬಾ ಗ್ರಾಮದ ಕುಂಟಲ್ಪಾಡಿ ಬಿಂದಾನಗರದಲ್ಲಿ ವೃದ್ಧೆಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಫೆ. 17ರಂದು ನಡೆದಿದೆ. ಮುಂಬಯಿಯಲ್ಲಿ ವಾಸವಿದ್ದ ವಿಮಲಾ ದೇವಾಡಿಗ (85) ಅವರು ಸಂಬಂಧಿಕರ ವಿವಾಹಕ್ಕೆಂದು ಕುಂಟಲ್ಪಾಡಿ ಬಿಂದಾನಗರಕ್ಕೆ ಆಗಮಿಸಿದ್ದರು.

ಫೆ. 17ರಂದು ಮನೆಯವರು ಕಟೀಲು ದೇವಸ್ಥಾನಕ್ಕೆ ತೆರಳಿದ್ದು ವಾಪಸು ಮನೆಗೆ ಬಂದಾಗ ಅಜ್ಜಿ ವಿಮಲಾ ದೇವಾಡಿಗ ಅವರು ಟಾಯ್ಲೆಟ್‌ನೊಳಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಕ್ಕಿನ ರಕ್ಷಣೆ ವೇಳೆ ಬಾವಿಗೆ ಬಿದ್ದ ವ್ಯಕ್ತಿ: ರಕ್ಷಣೆ
ಕಾರ್ಕಳ: ಬಾವಿಗೆ ಬಿದ್ದ ಬೆಕ್ಕಿನ ಮರಿಯ ರಕ್ಷಣೆ ವೇಳೆ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಘಟನೆ ನಂದಳಿಕೆ ಗ್ರಾ.ಪಂ. ಎದುರು ನಡೆದಿದೆ.

Advertisement

ಆವರಣವಿರುವ ಬಾವಿಗೆ ಬೆಕ್ಕೊಂದು ಬೀಳುವ ಸ್ಥಿತಿಯಲ್ಲಿತ್ತು. ಅದನ್ನು ರಕ್ಷಿಸಲೆಂದು ಭೋಜ (60) ಅವರು ಬಾವಿ ಬಳಿ ತೆರಳಿದಾದ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ.

ಮಾಹಿತಿ ಪಡೆದ ಕಾರ್ಕಳ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್‌ ಮೋನಿಸ್‌, ದಫೇದಾರ್‌ ರೂಪೇಶ್‌, ಸಿಬಂದಿ ಚಂದ್ರಶೇಖರ್‌, ಕೇಶವ್‌, ನಿತ್ಯಾನಂದ, ಸಂಜಯ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next