ಕಾಪು: ಮಂಗಳೂರಿನಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರನ್ನು ಕಾಪು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ.
ಕಾಪುವಿನಲ್ಲಿ ಬಂದೋಬಸ್ತ್ ನಲ್ಲಿದ್ದ ಪೊಲೀಸರಿಗೆ ಸಂಚರಿಸುತ್ತಿದ್ದ ಟಿಪ್ಪರ್‌ನಿಂದ ನೀರು ಇಳಿಯುತ್ತಿರುವುದು ಕಂಡುಬಂದ ಕಾರಣ ಮರಳು ಸಾಗಿಸುತ್ತಿರುವ ಬಗ್ಗೆ ಅನುಮಾನಗೊಂಡು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 3 ಯೂನಿಟ್ ಮರಳನ್ನು ತುಂಬಿಸಿರುವುದು ಕಂಡುಬಂದಿತು.
ಚಾಲಕ, ಶಿರ್ವ ನಿವಾಸಿ ಪ್ರದೀಪ್‌ನಲ್ಲಿ ವಿಚಾರಿಸಿದಾಗ ಶಿರ್ವ ನಿವಾಸಿ ಲತೀಫ್‌ಗೆ ಸೇರಿದ ಟಿಪ್ಪರ್ ಆಗಿದ್ದು ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಬಳಿಯ ಹೊಳೆಯಿಂದ ಮರಳನ್ನು ತೆಗೆಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದರು.
ಲತೀಫ್ ಹಾಗೂ ಪ್ರದೀಪ್ ಜತೆ ಸೇರಿ ಲಾಭ ಮಾಡುವ ಉದ್ದೇಶದಿಂದ ಸರಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಹಾಗೂ ಮರಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.