Advertisement
ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯನೆನಪಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಹಮ್ಮಿಕೊಂಡಿದೆ.
ರೈತರು ಮತ್ತು ಯೋಧರು ದೇಶದ ಬೆನ್ನೆಲುಬುಗಳಾಗಿದ್ದಾರೆ. ನಮ್ಮ ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಇಬ್ಬರನ್ನೂ
ಸ್ಮರಿಸಿಕೊಳ್ಳಬೇಕು ಎಂದರು.
ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಸಸಿಗಳನ್ನು ಬೆಳೆಸುವ ಉದ್ದೇಶ ಹಾಗೂ ಆಜಾದಿ ಕಾ
ಅಮೃತ್ ಮಹೋತ್ಸವದ ಕಾರ್ಯಕ್ರಮ ಕೊನೆಯ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ
ಎಂದು ತಹಶೀಲ್ದಾರ್ ನಾಗರಾಜ್ ವಿ. ನಾಯ್ಕಡ ತಿಳಿಸಿದರು. ಇದಕ್ಕೂ ಮುನ್ನ ಕಾಪು ಕೆ1 ಹೊಟೇಲ್ ಬಳಿಯಿಂದ ಕಾಪು ಪೇಟೆ – ಪೊಲೀಸ್ ಠಾಣೆ – ಲಕ್ಷ್ಮೀ ಜನಾರ್ದನ ದೇವಸ್ಥಾನದವರೆಗೆ
ಕಲಶ ಯಾತ್ರೆ ನಡೆಸಲಾಯಿತು. ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಯೋಧರಾದ ಡೇನಿಯಲ್
ಡೊಮಿನಿಕ್ ಡಿ’ಸೋಜಾ, ಮಥಾಯಿ ಪಿ.ಎಂ., ಪ್ರದೀಪ್, ಅನಂತಪದ್ಮನಾಭ ನಾಯಕ್ ವೈ., ಎಸ್. ಇಬ್ರಾಹಿಂ ಬ್ಯಾರಿ
ಅವರನ್ನು ಸಮ್ಮಾನಿಸಲಾಯಿತು. ಕಾಪು ಸರಕಾರಿ ಕಾಲೇಜು ಪ್ರಾಂಶು ಪಾಲ ಡಾ| ಗೋಪಾಲಕೃಷ್ಣ ಗಾಂವ್ಕರ್, ನೆಹರೂ ಯುವ
ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು. ತಾ. ಪಂ. ಇಒ ವಿಜಯ ಸ್ವಾಗತಿಸಿ ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಎಸ್.ಡಿ.
ವಂದಿಸಿದರು. ದಂಡತೀರ್ಥ ಪ. ಪೂ. ಕಾಲೇಜಿನ ಉಪನ್ಯಾಸಕ ಶಿವಣ್ಣ ಬಾಯಾರ್ ನಿರೂಪಿಸಿದರು.