Advertisement

ಕಾಪು: ಕ್ವಾರಂಟೈನ್‌ನಲ್ಲಿ 448 ಮಂದಿ

09:34 AM May 25, 2020 | Team Udayavani |

ಕಾಪು : ಮಹಾರಾಷ್ಟ್ರ ಮತ್ತಿತರ ಕಡೆಗಳಿಂದ ಬಂದಿರುವ 448 ಮಂದಿ ಕಾಪು ತಾಲೂಕಿನ ವಿವಿಧೆಡೆ ಕ್ವಾರಂಟೈನ್‌ನಲ್ಲಿದ್ದು ಅವರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ. ಇವರಲ್ಲಿ 325 ಮಂದಿ ಸರಕಾರಿ ಮತ್ತು 123 ಮಂದಿ ಖಾಸಗಿ ವ್ಯವಸ್ಥೆಯ ಕ್ವಾರಂಟೈನ್‌ನಲ್ಲಿದ್ದಾರೆ. ಇವರಿಗೆ ಕಾಪು, ಮೂಳೂರು ಮತ್ತು ಶಿರ್ವ ವ್ಯಾಪ್ತಿಯಲ್ಲಿ ಸರಕಾರಿ ಕ್ವಾರಂಟೈನ್‌ನ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿಯಾಗಿ ಉಳಿದುಕೊಳ್ಳಲು ಬಯಸಿರುವವರಿಗೆ ಹೊಟೇಲ್‌ಗ‌ಳಲ್ಲಿನ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಲಾಗಿದೆ.

Advertisement

ಪ್ರತೀ ಕ್ವಾರಂಟೈನ್‌ ಕೇಂದ್ರಗಳಲ್ಲಿ ತಾಲೂಕು ಆಡಳಿತ, ಪುರಸಭೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ ಸಿಬಂದಿ ಕರ್ತವ್ಯದ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ಪೊಲೀಸ್‌ ಇಲಾಖೆ ಮತ್ತು ಗೃಹ ರಕ್ಷಕದಳದ ಸಿಬಂದಿ ಮೂಲಕ ಭದ್ರತೆ ಒದಗಿಸಲಾಗಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿ ಇರುವವ‌ರಿಗೆ ಬೆಳಗ್ಗಿನ ಚಹಾ – ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಚಹಾ, ರಾತ್ರಿಯ ಊಟದ ವ್ಯವಸ್ಥೆಯನ್ನು ಕಾಪು ಹೊಸ ಮಾರಿಗುಡಿಯಿಂದ ಪೂರೈಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next