ಮುಂಬೈ : ಕಿರುತೆರೆಯ ನಿರೂಪಕ ಕಪಿಲ್ ಶರ್ಮಾ ವ್ಹೀಲ್ ಚೇರ್ ಮೇಲೆ ಕುಳಿತು ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಂದು (ಫೆ.22) ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದೃಶ್ಯ ಕಂಡು ಬಂದಿದೆ. ಬ್ಲ್ಯಾಕ್ ಡ್ರಸ್ ತೊಟ್ಟಿರುವ ಶರ್ಮಾ, ವ್ಹೀಲ್ ಚೇರ್ ನಲ್ಲಿ ಕುಳಿತು ತೆರಳುತ್ತಿರುವುದನ್ನು ಗಮನಿಸಿದ ಜನರು, ಇದನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಫೋಟೊ ಹಾಗೂ ವಿಡಿಯೋ ತೆಗೆಯುತ್ತಿದ್ದವರತ್ತ ಆಕ್ರೋಶ ಭರಿತ ನೋಟ ಬೀರಿದ ಶರ್ಮಾ, ಇಲ್ಲಿಂದ ನಡೆಯಿರಿ ಎಂದು ದಬಾಯಿಸಿದ್ದಾರೆ. ಕಪಿಲ್ ಶರ್ಮಾ ವ್ಹೀಲ್ ಚೇರ್ ಬಳಸಿರುವ ಕಾರಣ ತಿಳಿದು ಬಂದಿಲ್ಲ.
ಇನ್ನು ಹಿಂದಿಯ ಕಪಿಲ್ ಶರ್ಮಾ ಜನಪ್ರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇದರ ನಿರೂಪಣೆ ಕಪಿಲ್ ಶರ್ಮಾ ಅವರದ್ದು. ಈ ಶೋ ಇವರಿಗೆ ತುಂಬಾ ಹೆಸರು ತಂದು ಕೊಟ್ಟಿದೆ.