Advertisement

ಈ ಬೌಲರ್ ಐಪಿಎಲ್ ನ ನಿಜವಾದ ಹೀರೋ: ಕಪಿಲ್ ದೇವ್

07:33 AM Nov 22, 2020 | keerthan |

ಹೊಸದಿಲ್ಲಿ: ಸನ್‌ರೈಸರ್ ಹೈದರಾಬಾದ್‌ ತಂಡದ ಟಿ. ನಟರಾಜನ್‌ 13ನೇ ಐಪಿಎಲ್‌ ಕೂಟದ ನಿಜವಾದ ಹೀರೋ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್‌ದೇವ್‌ ಪ್ರಶಂಸಿಸಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್‌, “ಸದಾ ಬದಲಾಗುತ್ತಿರುವ ವೇಗದ ಬೌಲಿಂಗ್‌ನಲ್ಲಿ ನಿಖರವಾದ ಯಾರ್ಕರ್‌ಗಳನ್ನು ಹಾಕಿ ಮೂಲಭೂತ ವಿಷಯಗಳಿಗೆ ಅಂಟಿಕೊಳ್ಳುವ ಮೂಲಕ ತಮಿಳುನಾಡಿನ ವೇಗಿಯಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ’ ಎಂದರು.

“ಟಿ. ನಟರಾಜನ್‌ 2020ರ ಐಪಿಎಲ್‌ ಹೀರೋ. ಈ ವೇಗಿ ಯಾವುದೇ ಭಯವಿಲ್ಲದೆ ಅನೇಕ ಸ್ಟಾರ್‌ ಆಟಗಾರರಿಗೆ ಯಾರ್ಕರ್‌ ಎಸೆದು ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಯಾರ್ಕರ್‌ ಅತ್ಯುತ್ತಮ ಎಸೆತ. ಈಗ ಮಾತ್ರವಲ್ಲ, ಸುಮಾರು ನೂರು ವರ್ಷಗಳಿಂದಲೂ ಇದು ವೇಗಿಗಳ ಪಾಲಿನ ಪ್ರಮುಖ ಅಸ್ತ್ರವಾಗಿದೆ’ ಎಂದು ಕಪಿಲ್‌ ಹೇಳಿದರು.

ಬೌಲಿಂಗ್‌ ಓಕೆ; ಬ್ಯಾಟಿಂಗ್‌?

Advertisement

ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಬೌಲಿಂಗ್‌ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ, ಆದರೆ ಬ್ಯಾಟಿಂಗ್‌ ಸಾಮರ್ಥ್ಯ ತುಸು ಅನುಮಾನ ಮೂಡಿಸುತ್ತದೆ ಎಂದು ಕಪಿಲ್‌ದೇವ್‌ ಹೇಳಿದರು.

“ನಮ್ಮ ಪೇಸ್‌ ಬೌಲಿಂಗ್‌ ಉತ್ತಮ ಮಟ್ಟದಲ್ಲಿದೆ. ಆದರೆ ಇನ್ನಿಂಗ್ಸ್‌ ಒಂದರಲ್ಲಿ ನಮ್ಮ ಬ್ಯಾಟ್‌ ಮನ್‌ 400 ರನ್‌ ಪೇರಿಸಲು ಶಕ್ತರೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಏಕೆಂದರೆ 400 ರನ್‌ ಬಾರಿಸದೇ ಟೆಸ್ಟ್‌ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಇದನ್ನು ಸಾಧಿಸಲು ಶಕ್ತರಾದರೆ ಯಾವುದೇ ಸಮಸ್ಯೆ ಇಲ್ಲ ಎಂದರ್ಥ’ ಎಂಬುದಾಗಿ ಕಪಿಲ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next