Advertisement

ಇಮ್ರಾನ್‌ ಖಾನ್‌ ಪ್ರಮಾಣವಚನ: ಗಾವಸ್ಕರ್‌, ಕಪಿಲ್‌ದೇವ್‌ಗೆ ಆಹ್ವಾನ

12:25 PM Aug 02, 2018 | Team Udayavani |

ಲಾಹೋರ್‌: ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟ್‌ ನಾಯಕ ಇಮ್ರಾನ್‌ ಖಾನ್‌, ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟ್‌ ತಾರೆಗಳಾದ ಸುನೀಲ್‌ ಗಾವಸ್ಕರ್‌, ಕಪಿಲ್‌ದೇವ್‌ ಮತ್ತು ನವಜೋತ್‌ ಸಿಂಗ್‌ ಸಿದ್ಧು ಅವರಿಗೆ ಆಹ್ವಾನ ಕಳುಹಿಸಿದ್ದಾರೆ.

Advertisement

ಗಾವಸ್ಕರ್‌, ಕಪಿಲ್‌, ಸಿದ್ಧು ಅವರೆಲ್ಲ ಇಮ್ರಾನ್‌ ಖಾನ್‌ ಅವರ ಸಮಕಾಲೀನ ಕ್ರಿಕೆಟಿಗರೆಂಬುದು ವಿಶೇಷ. ಪಾಕಿಸ್ಥಾನ ತನ್ನ ಮೊದಲ ಹಾಗೂ ಈವರೆಗಿನ ಏಕೈಕ ಏಕದಿನ ವಿಶ್ವಕಪ್‌ ಪ್ರಶಸ್ತಿಯನ್ನು 1992ರಲ್ಲಿ ಇಮ್ರಾನ್‌ ನಾಯಕ ತ್ವದಲ್ಲೇ ಗೆದ್ದಿತ್ತು. ಅಂದು ಪಾಕ್‌ ಲೀಗ್‌ ಹಂತದಲ್ಲಿ ಭಾರತದ ವಿರುದ್ಧವಷ್ಟೇ ಸೋತಿತ್ತು (43 ರನ್‌). ಆ ಪಂದ್ಯದಲ್ಲಿ ಆಡಿದ ಕಪಿಲ್‌ 35 ರನ್‌ ಜತೆಗೆ 2 ವಿಕೆಟ್‌ ಕೂಡ ಉರುಳಿಸಿದ್ದರು. ಇಮ್ರಾನ್‌ ಖಾನ್‌ ಅವರ ಪ್ರಮಾಣವಚನ ಸ್ವೀಕಾರ ಸಮಾ ರಂಭ ಆ. 11ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next