Advertisement

ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ… ಶಾಸಕ ಚನ್ನಬಸಪ್ಪ ಆಕ್ರೋಶ

12:54 PM Oct 29, 2024 | sudhir |

ಶಿವಮೊಗ್ಗ: ಸಚಿವ ಜಮೀರ್ ಅಹ್ಮದ್ ಕರ್ನಾಟಕ ರಾಜ್ಯವನ್ನು ವಕ್ಫ್ ಬೋರ್ಡ್ ಮೂಲಕ ಮುಸ್ಲಿಂ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಶಾಸಕ ಚನ್ನಬಸಪ್ಪ ಆಕ್ರೋಶ ಹೊರ ಹಾಕಿದ್ದಾರೆ.

Advertisement

ವಕ್ಫ್ ನಿಂದ ರೈತರಿಗೆ ನೋಟಿಸ್ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ವಕ್ಫ್ ಉದ್ದೇಶಗಳು ಬೇರೆ ಬೇರೆ ಆದರೆ ರೈತರ ಜಮೀನು ಕಸಿದುಕೊಂಡು ವಕ್ಫ್ ಗೆ ಸೇರಿಸುವ ಕುತಂತ್ರಿ ಬುದ್ದಿಯನ್ನು ಮುಸ್ಲಿಂಮರು ಮಾಡುತ್ತಿದ್ದಾರೆ, ಮುಸ್ಲಿಂ ಬಂಧುಗಳು ಎನ್ನುಲು ನನಗೆ ಅಸಹ್ಯ ಅನ್ನಿಸಲು ಶುರುವಾಗಿದೆ.

ನಾವೇ ಎಷ್ಟೇ ಬಂಧುಗಳು ಎಂದುಕೊಂಡರು ಅವರು ಮಾಡಬಾರದ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಮುಸಲ್ ಮಾನ್ ಲ್ಯಾಂಡ್ ಮಾಫೀಯಾವನ್ನು ವಕ್ಪ್ ಮೂಲಕ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರೈತರಿಗೆ ವಕ್ಫ್ ಆಸ್ತಿ ಅಂತ ನೋಟಿಸ್ ನೀಡಲಾಗುತ್ತಿದ್ದರೂ ಸರ್ಕಾರ ಏನು ಮಾಡುತ್ತಿಲ್ಲ, ಮುಖ್ಯಮಂತ್ರಿಗಳೇ ಇಡೀ ರಾಜ್ಯವನ್ನೆ ವಕ್ಫ್ ಬೋರ್ಡ್ ಗೆ ಬರೆದು ಕೊಟ್ಟುಬಿಡಿ ಎಂದು ಕಿಡಿಕಾರಿದ್ದಾರೆ.

ನಿಮಗೆ ತಾಕತ್ತು ಇದ್ದರೆ ಕರ್ನಾಟಕದಲ್ಲಿರುವ ಎಲ್ಲಾ ಆಸ್ತಿ ವಕ್ಫ್ ಆಸ್ತಿ ಅಂತ ಅನೌಸ್ ಮಾಡಿ, ಕುತಂತ್ರದ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಇದು ರೈತದ್ರೋಹಿ ಸರ್ಕಾರ ಶಿವಮೊಗ್ಗದಲ್ಲೂ ಈ ತರಹದ ಘಟನೆಗಳು ನಡೆದಿದೆ. ಶಿವಪ್ಪನಾಯಕನ ವಂಶಸ್ಥರ ಸಮಾಧಿ ಜಾಗವನ್ನು ಸಹ ವಕ್ಫ್ ಗೆ ಸೇರಿಸುವ ಹುನ್ನಾರ ನಡೆಯುತ್ತಿದೆ, ಹೋರಾಟಗಾರರ ಆಸ್ತಿ ಸಂರಕ್ಷಣೆ ಮಾಡಲು ಆಗದಿರುವ ಸರ್ಕಾರ ಇದು, ಶಿವಮೊಗ್ಗದ ಈದ್ಗ ಮೈದಾನವನ್ನು ವಕ್ಫ್ ಜಾಗ ಎನ್ನುತ್ತಾರೆ ಈ ಜಾಗ ಮಹಾನಗರ ಪಾಲಿಕೆ ಹೆಸರಿನಲ್ಲಿದೆ ವಕ್ಫ್ ಲ್ಯಾಂಡ್ ಮಾಫಿಯ ಪದ್ದತಿಯನ್ನು ತಡೆಹಿಡಿಯಬೇಕು ಎಂದರು.

ಶಿವಮೊಗ್ಗದಲ್ಲಿ ರೈತರಿಗೆ ಈ ರೀತಿ ತೊಂದರೆ ಕೊಡುತ್ತಿರುವ ಜಮೀರ್ ಗೆ ಹೇಳಲು ಬಯಸುತ್ತೇನೆ ರೈತರ ಜಮೀನು ನಿಮ್ಮಪ್ಪನ ಆಸ್ತಿ ಅಲ್ಲ, ನೀನು ಇರುವ ಬಂಗಲೆ ಜಾಗ ವಕ್ಫ್ ಗೆ ಬರೆದುಕೊಡು ನೋಡೋಣ ನಿನ್ನ ಯೋಗ್ಯತೆಗೆ ಮಂತ್ರಿಗಳು ಎನ್ನುವ ಕಾರಣಕ್ಕೆ ನಿಮ್ಮ ಬಗ್ಗೆ ಗೌರವ ಇದೆ ಈ ರಾಜ್ಯವನ್ನು ವಕ್ಫ್ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ, ಇಡೀ ಹಿಂದೂ ಸಮಾಜ ಇದನ್ನು ವಿರೋಧ ಮಾಡುತ್ತೆ, ನಿಮ್ಮಪ್ಪನ ಮನೆ ಆಸ್ತಿ ಥರ ನಡೆದುಕೊಳ್ಳಬೇಡಿ ಜಮೀರ್ ತಾಕತ್ತು ಇದ್ದರೆ ನಿಮ್ಮ ಅರ್ಧ ಅಡಿ ಜಾಗವನ್ನು ಬಿಟ್ಟುಕೊಡಿ ನೋಡೋಣ ಎಂದು ಸವಾಲು ಹಾಕಿದರು.

Advertisement

ಹಿಂದೂ ದೇವಸ್ಥಾನಗಳು ವಕ್ಫ್ ಪ್ರಾಪರ್ಟಿ ಅಂತ ಘೋಷಣೆ ಮಾಡುತ್ತಿದ್ದೀರಾ ಹಿಂದೂ ಸಮಾಜ ಇದನ್ನು ಕ್ಷೇಮಿಸುವುದಿಲ್ಲ, ಜಮೀರ್ ಯಾವತ್ತು ಕೂಡ ಹೊಡೆಯುವ ನೀತಿಯನ್ನೆ ಅನಿಸರಿಸುತ್ತಿರೋದು, ಭಯೊತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದ್ದೀರಾ, ದಾಳಿಕೋರರಿಗೆ ಹಣ ಊಟ ಕೊಟ್ಟು ಸಾಕುತ್ತಿದ್ದೀರಾ, ನಿಮ್ಮ ತೊಘಲಕ್ ದರ್ಬಾರ್ ಹೆಚ್ಚು ದಿನ ನಡೆಯೋದಿಲ್ಲ ಇದಕ್ಕೆ ಹಿಂದೂ ಸಮಾಜ ಕಡಿವಾಣ ಹಾಕುತ್ತೆ ಎಂದು ಎಚ್ಚರಿಕೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next