Advertisement

ಕಪ್ಪತ್ತಗುಡ್ಡ ರಕ್ಷಣೆಗೆ ಜನಾಂದೋಲನ

02:13 PM Jun 10, 2020 | Suhan S |

ಮುಂಡರಗಿ: ಗದಗ, ಕೊಪ್ಪಳ, ಬಳ್ಳಾರಿ, ಹಾವೇರಿ ಜಿಲ್ಲೆಗಳ ಜೀವನಾಡಿ ಕಪ್ಪತ್ತಗುಡ್ಡವನ್ನು ಈ ಹಿಂದೆ ರಾಜ್ಯ ಸರಕಾರ ವನ್ಯಜೀವಿಧಾಮವೆಂದು ಘೋಷಿಸಿದೆ. ಬಂಡವಾಳ ಶಾಹಿಗಳ ಒತ್ತಡಕ್ಕೆ ಮನಿದು ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ರಾಜ್ಯ ಸರಕಾರವು ವನ್ಯಜೀವಿಧಾಮ ಸ್ಥಾನಮಾನ ಹಿಂದಕ್ಕೆ ಪಡೆದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌. ಗೌಡರ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪತ್ತಗುಡ್ಡಕ್ಕೆ ನೀಡಿರುವ ವನ್ಯಜೀವಿಧಾಮ ಸ್ಥಾನಮಾನ ಹಿಂಪಡೆದರೆ ಕಪ್ಪತಗುಡ್ಡ ಉಳಿಸಿ ಅಭಿಯಾನದೊಂದಿಗೆ ಕಾನೂನು ಸಮರ ನಡೆಸಲಾಗುವುದು. ವನ್ಯಜೀವಿಧಾಮದ ಸ್ಥಾನಮಾನವನ್ನು ಹಿಂಪಡೆಯಲು ರಾಜ್ಯ ಸರಕಾರದ ಮೇಲೆ ಈ ಭಾಗದ ಜನಪ್ರತಿನಿ ಧಿಗಳು ಒತ್ತಡ ಹೇರುವ ಹುನ್ನಾರ ನಡೆಸಿದ್ದಾರೆ. ಈ ಹಿಂದೆ ಕಪ್ಪತ್ತಗುಡ್ಡ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ವನ್ಯಜೀವಿಧಾಮ ಸ್ಥಾನಮಾನಕ್ಕಾಗಿ ಠರಾವು ಪಾಸು ಮಾಡಿ ಬೆಂಬಲ ಸೂಚಿಸಲಾಗಿತ್ತು.

ಆದರೆ ಈಗ ಶಾಸಕರು, ಸಂಸದರು ಬಂಡವಾಳಶಾಹಿಗಳ ಕುಮ್ಮಕ್ಕಿನಿಂದ ವನ್ಯಜೀವಿಧಾಮದ ಸ್ಥಾನಮಾನ ಹಿಂಪಡೆಯಲು ರಾಜ್ಯ ಸರಕಾರದ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತಿದ್ದಾರೆ. ಕಪ್ಪತ್ತಗುಡ್ಡ ಅಪರೂಪದ ಸಸ್ಯ ಸಂಪತ್ತು ಹೊಂದಿದೆ. ಗಣಗಾರಿಕೆಯು ನಡೆದರೇ ಕಪ್ಪತ್ತಗುಡ್ಡದ ಪರಿಸರ ನಾಶವಾಗಲಿದೆ. ಅಪರೂಪದ ಸಸ್ಯ ಸಂಪತ್ತು, ಸಸ್ಯ ವೈವಿಧ್ಯತೆ, ಜೀವಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯು ಪ್ರತಿಯೊಬ್ಬ ನಾಗರಿಕರದ್ದು ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next