Advertisement
ಕರ್ಮೆಲಿತ್ ಸಮೂಹದ ಕರ್ನಾಟಕ -ಗೋವಾ ಪ್ರಾಂತ್ಯದ ಧರ್ಮಾಧಿಕಾರಿ ವಂದನೀಯ ರೆ| ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಅವರು ಕೃತಜ್ಞತಾ ದಿವ್ಯಪೂಜೆ ನೆರವೇರಿಸಿ ಆಶೀರ್ವಚನ ನೀಡಿ, ಮೇರಿಮಾತೆ ಕೌಟುಂಬಿಕ ಬದುಕನ್ನು ರೂಢಿಸುವಲ್ಲಿ ವಿಭಿನ್ನ ರೀತಿಯ ಚಿಂತನೆ ಮೈಗೂಡಿದ ದೇವಮಾತೆ ಆಗಿದ್ದಾರೆ. ಏಕೆಂದರೆ ಈ ಮಾತೆ ದೇವರ ಆಶಯದ ಪೂರ್ಣತೆ ತಿಳಿದವರು. ಆದ್ದರಿಂದ ಮಾತೆ ಮರಿಯಮ್ಮರನ್ನು ಕ್ರಿಶ್ಚಿ ಯನ್ನರು ಪ್ರಧಾನವಾಗಿ ನಂಬಿ, ಆರಾಧಿಸುತ್ತಾರೆ. ಅವರ ಆದರ್ಶಗಳು ಬಂಧುತ್ವ, ಸಹೋದರತ್ವ ಮತ್ತು ಕೂಡು ಕುಟುಂಬವಾಗಿ ಬಾಳಲು ಪ್ರೇರಕವಾಗಿವೆ. ಮನುಕುಲದ ಪೂರ್ಣತೆಯ ಬಾಳಿಗೆ ಅವರ ಜೀವನಶೈಲಿ ಪೂರಕವಾಗಿದೆ. ಮಾತೆಯ ಅನುಗ್ರಹದಿಂದ ನಾವು ಸದಾ ಹರ್ಷೋಲ್ಲಾಸದಿಂದ ಸದ್ಭಾ ವನೆಯಿಂದ ಬಾಳುತ್ತಾ ಪರರಿಗೆ ಆದರ್ಶರಾಗಬೇಕು ಎಂದು ನುಡಿದರು.
Related Articles
Advertisement
ಅಸೋಸಿಯೇಶನ್‌ನ ಆಧ್ಯಾ ತ್ಮಿಕ ನಿರ್ದೇಶಕ ಫಾ| ಮೆಲ್ವಿನ್ ಡಿಕುನ್ಹಾ ನಿರ್ದೇಶನದಲ್ಲಿ ಆಚರಿಸ ಲ್ಪಟ್ಟ ವಾರ್ಷಿಕ ಉತ್ಸವದಲ್ಲಿ ಅಸೋ ಸಿಯೇಶನ್ ಅಧ್ಯಕ್ಷ ಡೈಗೋ ರೋಡ್ರಿಗಸ್, ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ, ಕೋಶಾಧಿಕಾರಿ ಲಾರೇನ್ಸ್ ಮಥಾಯಸ್, ಜತೆ ಕಾರ್ಯದರ್ಶಿ ಜೆರಾಲ್ಡ್ ಡಿ’ಸೋಜಾ, ಜತೆ ಕೋಶಾಧಿಕಾರಿ ಜೋನ್ ಕೊರೆಯಾ, ಸಾಂಸ್ಕೃತಿಕ ಕಾರ್ಯದರ್ಶಿ ಜೊಸ್ಸಿ ಗೊನ್ಸಾಲ್ವಿಸ್, ಜತೆ ಕಾರ್ಯದರ್ಶಿ ವಿಕ್ಟರ್ ಮಸ್ಕರೇನಸ್, ಮಾಜಿ ಪದಾಧಿಕಾರಿಗಳಾದ ಜೋನ್ ಕ್ರಾಸ್ತ, ಅರುಣ್ ನೊರೋನ್ಹಾ, ಡೆನಿಸ್ ರೆಬೆಲ್ಲೋ, ವಿಲ್ಡಾ ಸೆರಾವೋ ಸೇರಿದಂತೆ ಇತರ ಸದಸ್ಯರು ಪಾಲ್ಗೊಂಡು ಕರ್ನಾಟಕ ಕರಾವಳಿ ಕೊಂಕಣಿ ಕ್ರೈಸ್ತ ಜನತೆ ರೂಢಿಸಿರುವ ಈ ಸಾಂಪ್ರದಾಯಿಕ ಹಬ್ಬವನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರಕೃತಿ ಉತ್ಸವವಾಗಿ ಸಂಭ್ರಮಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್