Advertisement
ರಿಷಭ್ “ಕಾಂತಾರ’ದಲ್ಲಿ ಕಂಬಳವೂ ಪ್ರಮುಖ ಆಕರ್ಷಣೆ. ಅದಕ್ಕಾಗಿ ಚಿತ್ರತಂಡ ಕಂಬಳ ಓಟವನ್ನು ಆಯೋಜಿಸಿ, ಆ ಮೂಲಕ ಚಿತ್ರೀಕರಿಸಿದೆ. ಜೊತೆಗೆ ಕಂಬಳ ಓಟದಲ್ಲಿ ಸ್ವತಃ ರಿಷಭ್ ಕಾಣಿಸಿಕೊಂಡಿದ್ದು, ಅದಕ್ಕಾಗಿ ವಾರಗಟ್ಟಲೇ ತರಬೇತಿ ಕೂಡಾ ಪಡೆದಿದ್ದಾರೆ. “ಕಂಬಳ ಓಡಿದ್ದು ಒಂದು ವಿಭಿನ್ನ ಅನುಭವ. ಸಿನಿಮಾಗೆ ಅವಶ್ಯಕತೆ ಇರುವಷ್ಟನ್ನು ಮಾತ್ರ ಮಾಡಿದೆ. ಇದರ ಜತೆಗೆ ಕರಾವಳಿ ಭಾಗದ ಹಳ್ಳಿ ಯುವಕ ಮತ್ತು ಕೋಣ ಓಡಿಸುವವನು ಹೇಗಿರುತ್ತಾನೋ ಎಂಬ ಲುಕ್ ಕೂಡಾ ಇಲ್ಲಿದೆ’ ಎನ್ನುವುದು ರಿಷಭ್ ಮಾತು.
Related Articles
Advertisement
“ಕಾಂತಾರ’ ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಹೆಚ್ಚು ಆ್ಯಕ್ಷನ್‌ಗಳಿವೆ. ಆದರೆ, ಈ ಎಲ್ಲಾ ಆ್ಯಕ್ಷನ್‌ಗಳಲ್ಲಿ ರಿಷಭ್ ಡ್ನೂಪ್ ಇಲ್ಲದೇ ಫೈಟ್ ಮಾಡಿದ್ದಾರಂತೆ. ಕರಾವಳಿ ಭಾಗದ ಕಥೆಯಾಗಿರುವುದರಿಂದ ಫೈಟ್ ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ಯಾವುದೇ ಡ್ನೂಪ್ ಸಹಾಯವಿಲ್ಲದೇ ಫೈಟ್ ಮಾಡಿದ್ದಾರಂತೆ ರಿಷಭ್.
ಇನ್ನು, ಕಾಂತಾರ ಚಿತ್ರ ಮಂಗಳೂರು, ಕುಂದಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಕಥೆ ಹೊಂದಿದೆ. ಅಲ್ಲಿನ ವಾತಾವಾರಣ ಕಥೆಗೆ ಅಗತ್ಯವಾದ ಕಾರಣ ಇದನ್ನು ಇಲ್ಲಿ ಚಿತ್ರೀಕರಿಸಿದೆ ಚಿತ್ರತಂಡ.