ಸುರತ್ಕಲ್: ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ನೇಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಮಂತ್ರಮುಗ್ಧರಾದರು.
ಇಲ್ಲಿನ ದೇವಸ್ಥಾನದಲ್ಲಿರುವ ದೈವಗಳ ದೇವರು ಭೇಟಿ ಕಾರ್ಯ ಕ್ರಮ ಜಾತ್ರೆ ಸಂದರ್ಭ ನಡೆಯುತ್ತದೆ. ಸಮೀಪದಲ್ಲೇ ಇರುವ ಎನ್‌ಐಟಿಕೆ ತಾಂತ್ರಿಕ ವಿದ್ಯಾಲಯಕ್ಕೆ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳು ಕಲಿಕೆಗಾಗಿ ಆಯ್ಕೆಯಾಗಿ ಬರುತ್ತಾರೆ. ಸಮೀಪದ ಬೀಚ್ ನಲ್ಲಿ ಒಂದಿಷ್ಟು ತಿರುಗಿ ಹೋಗುವವರೇ ಅಧಿಕ. ಆದರೆ ಈ ಬಾರಿ ಆಸ್ಕರ್‌ಗೆ ಆಯ್ಕೆಯಾಗಿ ಗಮನ ಸೆಳೆದ ಕಾಂತಾರ ಸಿನೆಮಾ ವೈರಲ್ ಸುದ್ದಿ, ಗುಳಿಗ, ಕೊರಗಜ್ಜ ದೈವಗಳ ಮಹಿಮೆಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ವೈರಲ್ ಆಗುತ್ತಿರುವಂತೆಯೇ ಎನ್‌ಐಟಿಕೆ ವಿದ್ಯಾರ್ಥಿಗಳು ಸಾಲುಗಟ್ಟಿ ಇಲ್ಲಿನ ಕ್ಷೇತ್ರದ ನೇಮಕ್ಕೆ ಆಗಮಿಸಿ ವೀಕ್ಷಿಸಿ ಒಂದಿಷ್ಟು ಫೋಟೋ, ವೀಡಿಯೋ ಮಾಡಿಕೊಂಡರು.
ದೈವಗಳ ಹಾವ ಭಾವ ಕಂಡು ಮೊದಲು ನೋಡುತ್ತಿರುವ ವಿದ್ಯಾರ್ಥಿಗಳು ತದೇಕಚಿತ್ತದಿಂದ ನೋಡುತ್ತಿದ್ದರೆ, ಸ್ಥಳೀಯ ವಿದ್ಯಾರ್ಥಿಗಳು ನೇಮದ ರೀತಿ ರಿವಾಜನ್ನು ವಿವರಿಸುತ್ತಿದ್ದು ಕಂಡು ಬಂತು. ಒಟ್ಟಿನಲ್ಲಿ ತುಳುನಾಡಿದ ದೈವಗಳ ಕಾರಣಿಕ ಪ್ರಸಿದ್ಧಿ ಒಂದೇ ಸಮನೆ ಏರತೊಡಗಿದೆ.
ಇದನ್ನೂ ಓದಿ: ಸುರತ್ಕಲ್ : ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ