Advertisement

Kantara 2:‌ ʼಕಾಂತಾರ-2ʼ ಶೂಟಿಂಗ್‌‌ ಆರಂಭಕ್ಕೆ ಡೇಟ್‌ ಫಿಕ್ಸ್; ಯಾವಾಗ ರಿಲೀಸ್?

07:29 PM Aug 21, 2023 | Team Udayavani |

ಬೆಂಗಳೂರು: ಕನ್ನಡದ ʼಕಾಂತಾರʼ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಹಿಟ್‌ ಆದದ್ದು ಗೊತ್ತೇ ಇದೆ. ವರ್ಲ್ಡ್‌ ವೈಡ್‌ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ʼಕಾಂತಾರʼ ದ 2ನೇ ಭಾಗ ಅಂದರೆ ಪ್ರೀಕ್ವೆಲ್‌ ಬಗ್ಗೆ ಜನರಿಗೆ ದೊಡ್ಡಮಟ್ಟದ ನಿರೀಕ್ಷೆಯಿದೆ.

Advertisement

16 ಕೋಟಿ ರೂ. ಬಜೆಟ್‌‌ನಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ತಯಾರಾದ ʼಕಾಂತಾರʼ ತುಳುನಾಡಿನ ದೈವದ ಕಥೆಯನ್ನು ಒಳಗೊಂಡಿದೆ. ತುಳುನಾಡಿನ ಮಣ್ಣಿನ ಕಥೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಸಿನಿಮಾ, ಬಳಿಕ ಇತರ ಭಾಷೆಗೆ ಡಬ್‌ ಆಗಿ ತೆರೆಕಂಡಿತ್ತು.

ಪ್ರಾದೇಶಿಕ ಭಾಷೆಯಲ್ಲೂ ಹಿಟ್‌ ಆದ ಬಳಿಕ ಸಿನಿಮಾದ ಪ್ರೀಕ್ವೆಲ್‌ ನ್ನು ತೆರೆಗೆ ತರುವುದಾಗಿ ರಿಷಬ್‌ ಶೆಟ್ಟಿ ಇದೇ ವರ್ಷದ ಫೆಬ್ರವರಿಯಲ್ಲಿ ಸಿನಿಮಾದ 100 ದಿನದ ಸಂಭ್ರಮದಲ್ಲಿ ಹೇಳಿದ್ದರು. ನೀವು ನೋಡಿರುವುದು ಸಿನಿಮಾದ 2ನೇ ಭಾಗ ಮುಂದೆ ಬರಲಿರುವುದು ಸಿನಿಮಾದ ಪ್ರೀಕ್ವೆಲ್‌ ಎಂದು ಹೇಳಿ ಕುತೂಹಲ ಹುಟ್ಟಿಸಿದ್ದರು.

ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎನ್ನುವುದನ್ನು ಈ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು.“ರಿಷಬ್ ಶೆಟ್ಟಿ ಅವರು ʼಕಾಂತಾರ-2” ಸಿನಿಮಾದ ಕಥೆ ಬರೆಯುತ್ತಿದ್ದಾರೆ. ಅದರ ತಯಾರಿಗಾಗಿ, ಚಿತ್ರಕ್ಕಾಗಿ ಸಂಶೋಧನೆ ನಡೆಸಲು ಎರಡು ತಿಂಗಳು ತಮ್ಮ ರೈಟಿಂಗ್‌ ಟೀಮ್‌ ನೊಂದಿಗೆ ರಿಷಬ್‌  ಕರಾವಳಿ ಕರ್ನಾಟಕದ ಕಾಡುಗಳನ್ನು ಸುತ್ತಲಿದ್ದಾರೆ”ಎಂದು ಹೇಳಿದ್ದರು.

ಇದೀಗ ʼಕಾಂತಾರ-2ʼ ಬಗ್ಗೆ ಹೊಸ ಅಪ್ಡೇಟ್‌ ವೊಂದು ಹೊರ ಬಂದಿದ್ದು, ಶೂಟಿಂಗ್‌ ಶೆಡ್ಯೂಲ್‌ ನ್ನು ಚಿತ್ರತಂಡ ಹಾಕಿಕೊಂಡಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

Advertisement

ರಿಷಬ್‌ ಮತ್ತು ತಂಡದವರು ʼಕಾಂತಾರ-2ʼ ಬರವಣಿಗೆ ಹಂತವನ್ನು ಮುಗಿಸಿದ್ದಾರೆ. ಸದ್ಯ  ಪ್ರೀ-ಪ್ರೊಡಕ್ಷನ್ ನಲ್ಲಿ ಚಿತ್ರತಂಡ ನಿರತವಾಗಿದೆ. ಮೊದಲ ಹಂತದ ಶೂಟ್ ಗಾಗಿ ಕಾಡು, ಭೂಮಿ ಮತ್ತು ನೀರಿನ ಅಗತ್ಯವಿರುವುದರಿಂದ ಮೊದಲ ಭಾಗವನ್ನು ರಿಷಬ್ ಹುಟ್ಟೂರಾದ ಕುಂದಾಪುರದಲ್ಲಿ ಚಿತ್ರೀಕರಿಸಿದರೆ, ಆ ಬಳಿಕ ಕೆಲ ದೃಶ್ಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ʼಪಿಂಕ್‌ ವಿಲ್ಲಾʼಗೆ ಮೂಲಗಳು ಹೇಳಿರುವುದಾಗಿ ವರದಿ ಮಾಡಿದೆ.

ʼಕಾಂತಾರ-2ʼ ಬಿಗ್‌ ಬಜೆಟ್ ಮತ್ತು ಪಾತ್ರವರ್ಗದಲ್ಲಿ ದೊಡ್ಡದಾಗಿರಲಿದೆ. ಒಟ್ಟು 4 ತಿಂಗಳು ಸಿನಿಮಾವನ್ನು ಚಿತ್ರೀಕರಿಸಲಾಗುತ್ತದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಶೂಟ್‌ ಮುಗಿಯಲಿದ್ದು,2024 ರ ಕೊನೆಯಲ್ಲಿ ಸಿನಿಮಾ ರಿಲೀಸ್‌ ಮಾಡುವ ಯೋಜನೆಯಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next