Advertisement
ಸಿನಿಮಾದ ಮುಹೂರ್ತ ನಡೆದು, ಕಲಾವಿದರ ಆಯ್ಕೆಗಾಗಿ ಅಡಿಷನ್ ಕೂಡ ನಡೆದಿದೆ. ಈಗಾಗಲೇ ʼಕಾಂತಾರ ಪ್ರೀಕ್ವೆಲ್ʼ ಟೀಸರ್ ದೊಡ್ಟಮಟ್ಟದಲ್ಲಿ ಸೌಂಡ್ ಮಾಡಿದೆ.
Related Articles
Advertisement
ಇತ್ತೀಚೆಗೆ ಪ್ರಶಾಂತ್ ನೀಲ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ.ಎನ್ ಟಿಆರ್ ದಂಪತಿ ಸಹಿತ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್, ರಿಷಬ್ ಶೆಟ್ಟಿ ದಂಪತಿ ಕೂಡ ಆಗಿದ್ದರು. ಈ ವೇಳೆ ರಿಷಬ್ ಶೆಟ್ಟಿ ತಾರಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಇದೇ ಕಾರಣದಿಂದ ಜೂ.ಎನ್ ಟಿಆರ್ ʼಕಾಂತಾರ-1ʼ ರಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.
ಪ್ರಶಾಂತ್ ನೀಲ್ ಅವರೊಂದಿಗೆ ಜೂ.ಎನ್ ಟಿಆರ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಜೂ.ಎನ್ ಟಿಆರ್ ಹಾಗೂ ರಿಷಬ್ ಶೆಟ್ಟಿ ಅವರ ಊರು ಕುಂದಾಪುರಕ್ಕೂ ನಂಟಿದೆ. ತಾರಕ್ ಅವರ ತಾಯಿ ಶಾಲಿನಿ ಮೂಲತಃ ಕುಂದಾಪುರದವರು. ಈ ಕಾರಣದಿಂದ ತಾರಕ್ ಕನ್ನಡವನ್ನು ಸರಾಗವಾಗಿ ಮಾತನಾಡುತ್ತಾರೆ.
ಈ ಹಿಂದೆ ಜೂ. ಎನ್‌ಟಿಆರ್ ಜೊತೆ ಸಿನಿಮಾ ಮಾಡುತ್ತೀರಾ ಎಂದು ರಿಷಬ್ ಅವರಿಗೆ ಕೇಳಲಾಗಿತ್ತು. ಆದರೆ ಸದ್ಯಕ್ಕೆ ಅಂಥ ಯೋಚನೆ ಇಲ್ಲ ಎಂದಿದ್ದರು. ಕಥೆ, ಸ್ಕ್ರಿಪ್ಟ್ ತಯಾರಿ ಬಳಿಕ ಕಲಾವಿದರ ಆಯ್ಕೆ ಆಗುತ್ತದೆ ಎಂದು ರಿಷಬ್ ಹೇಳಿದ್ದರು.
ಇದೀಗ ಜೂ. ಎನ್ ಟಿಆರ್ ʼಕಾಂತಾರ ಪ್ರೀಕ್ವೆಲ್ʼ ನಲ್ಲಿ ನಟಿಸಲಿದ್ದಾರೆ ಎಂದು ಟಾಲಿವುಡ್ ಅಭಿಮಾನಿಗಳ ನಡುವೆ ಮಾತುಗಳು ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಎಲ್ಲೂ ಕೂಡ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.