ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪ ಸಮಿತಿಯ ವತಿಯಿಂದ ವಾರ್ಷಿಕ ಕಾಂತಾಬಾರೆ- ಬೂದಬಾರೆ ಒಳಾಂಗಣ ಕ್ರೀಡಾಸ್ಪರ್ಧೆಯು ಸೆ. 30 ರಂದು ಬೆಳಗ್ಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ 2018ನೇ ಸಾಲಿನ ವಾರ್ಷಿಕ ಕಾಂತಾಬಾರೆ-ಬೂದಬಾರೆ ಒಳಾಂಗಣ ಸ್ಪರ್ಧೆಗೆ ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ ಎಲ್. ವಿ. ಅಮೀನ್ ಕೋಟಿ-ಚೆನ್ನಯ ಹಾಗೂ ಕಾಂತಾಬಾರೆ-ಬೂದಬಾರೆ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ದೀಪ ಬೆಳಗಿಸಿ ಸಾಂಕೇತಿಕವಾಗಿ ಚಾಲನೆ ನೀಡಿ ಸ್ಪರ್ಧಾರ್ಥಿಗಳಿಗೆ ಶುಭಹಾರೈಸಿದರು.
ಬಿಲ್ಲವರ ಅಸೋ. ಮಾಜಿ ಗೌರವ ಪ್ರಧಾನ ಕೋಶಾಧಿಕಾರಿ ಎನ್. ಎಂ. ಸನೀಲ್ ಮತ್ತು ಹಾಲಿ ಉಪಾಧ್ಯಕ್ಷ ಹರೀಶ್ ಜಿ. ಅಮೀನ್ ಅವರು ಟೇಬಲ್ ಟೆನಿಸ್ ಆಟ ಆಡುವುದರ ಮೂಲಕ ಹಾಗೂ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಆರ್. ಕರ್ಕೇರ ಅವರು ಕೇರಂ ಆಟ ಆಡುವುದರ ಮೂಲಕ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇ ಶನ್‌ನ ಗೌರವ ಪಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹೇಶ್ ಸಿ. ಕಾರ್ಕಳ, ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ, ನಿಲೇಶ್ ಪೂಜಾರಿ ಪಲಿಮಾರ್, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ. ಪೂಜಾರಿ ಸೇರಿದಂತೆ ಯುವ ವಿಭಾಗದ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಟೇಬಲ್ ಟೆನಿಸ್, ಕೆರಂ, ಚೆಸ್, ಸಂಗೀತ, ಚಿತ್ರಕಲೆ, ರಂಗೋಲಿ, ಲ್ಯಾಂಡ್‌ಸ್ಕೇಪ್ ಇತ್ಯಾದಿ ಸ್ಪರ್ಧೆಗಳು ನಡೆಯಿತು. ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್ ಸ್ವಾಗತಿಸಿ ಅತಿಥಿ-ಗಣ್ಯರುಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಉಮೇಶ್ ಎನ್. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರವಿ ಎಸ್. ಸನೀಲ್ ಸ್ಪರ್ಧೆಗಳನ್ನು ನಿರ್ವಹಿಸಿದರು.
ಚಿತ್ರ- ವರದಿ : ರೊನಿಡಾ ಮುಂಬಯಿ