Advertisement

ಕಾನ್ಪುರ ರೈಲು ದುರಂತ: ಪಾಕಿಸ್ಥಾನದ ಕೈವಾಡ ?

03:45 AM Jan 18, 2017 | Team Udayavani |

ಪಟ್ನಾ /ಕಾನ್ಪುರ: ಇದುವರೆಗೆ ಬಾಂಬ್‌ ಇಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಪಾಕಿಸ್ಥಾನದ ಐಎಸ್‌ಐ ಈಗ ಬೇರೊಂದು ಮಾರ್ಗ ತುಳಿದಿದೆಯೇ? ಹೌದು ಎನ್ನುತ್ತಿವೆ ಮೂಲಗಳು. ಕಳೆದ ವರ್ಷದ ನವೆಂಬರ್‌ 21ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ 150 ಮಂದಿಯನ್ನು ಬಲಿ ತೆಗೆದುಕೊಂಡ ಇಂದೋರ್‌-ಪಟ್ನಾ ರೈಲು ದುರಂತಕ್ಕೆ ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಕಾರಣವೆಂಬ ಬಲವಾದ ಶಂಕೆ ಈಗ ಉಂಟಾಗಿದೆ.

Advertisement

ಕಳೆದ ವರ್ಷ ಅ. 1ರಂದು ಬಿಹಾರದ ರಕೌಲ್‌-ಸೀತಾಮಢಿ ರೈಲು ಮಾರ್ಗದಲ್ಲಿ ಸುಧಾರಿತ ಸ್ಫೋಟಕ (ಐಇಡಿ) ದೊರೆತಿತ್ತು. ಈ ಸಂಬಂಧ ಮೋತಿ ಪಾಸ್ವಾನ್‌ ಸಹಿತ ಮೂವರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಪೊಲೀಸ್‌ ತನಿಖೆ ವೇಳೆ, “ನೇಪಾಲ ಮೂಲದವನಾದ ದುಬಾೖ ವಾಸಿ ಉದ್ಯಮಿ ಶಂಸುಲ್‌ ಹೋಡಾ ಎಂಬಾತ ಈ ಕೃತ್ಯ ಎಸಗಲು ತನಗೆ ಹಣ ನೀಡಿದ್ದ ಎಂದು ಆರೋಪಿಯೊಬ್ಬ ತಪ್ಪೊಪ್ಪಿ ಕೊಂಡಿದ್ದಾನೆ. ಈ ಉದ್ಯಮಿಗೆ ಐಎಸ್‌ಐ ಕುಮ್ಮಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ಇಂದೋರ್‌-ಪಟ್ನಾ ರೈಲು ದುರಂತ ಹಾಗೂ ಸಿಯಾಲ್‌ದಹಾ-ಅಜೆರ್‌ ರೈಲು ದುರಂತದ ಹಿಂದೆಯೂ ಇದೇ ಜಾಲದ ಕೈವಾಡ ಇರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ’ ಎಂದು ಬಿಹಾರದ ಪೂರ್ವ ಚಂಪಾರಣ್ಯದ ಎಸ್‌ಪಿ ತಿಳಿಸಿದ್ದಾರೆ.

ಇಂದೋರ್‌- ಪಟ್ನಾ ನಡುವಿನ ಎಕ್ಸ್‌ಪ್ರೆಸ್‌ ರೈಲಿನ 14 ಬೋಗಿಗಳು ಕಾನ್ಪುರದಲ್ಲಿ ಹಳಿ ತಪ್ಪಿ 150 ಮಂದಿ ಸಾವಿಗೀಡಾಗಿದ್ದರು. ಈ ಅಪಘಾತಕ್ಕೆ ಹಳಿ ಬಿರುಕು ಬಿಟ್ಟದ್ದೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ ಐಎಸ್‌ಐ ಕುಮ್ಮಕ್ಕಿನಿಂದ ಐಇಡಿ ಇಟ್ಟು ಸ್ಫೋಟಿಸಿರುವ ಅನುಮಾನ ಈಗ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next