Advertisement

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

07:19 PM Sep 30, 2024 | Team Udayavani |

ಕಾನ್ಪುರ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಅಭೂತಪೂರ್ವ ವೃತ್ತಿಜೀವನದಲ್ಲಿ ಮತ್ತೊಂದು ದಾಖಲೆಯನ್ನು ಬರೆದರು. ಅವರು ಸೋಮವಾರ (ಸೆ.30) ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ನ ನಾಲ್ಕನೇ ದಿನದಂದು ಅತಿ ವೇಗವಾಗಿ 27,000 ಅಂತಾರಾಷ್ಟ್ರೀಯ ರನ್‌ ಗಳಿಸಿದ ಆಟಗಾರರಾದರು.

Advertisement

ವಿರಾಟ್ ಕೇವಲ 594 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ (623 ಇನ್ನಿಂಗ್ಸ್) ದಾಖಲೆಯನ್ನು ಇದೇ ವೇಳೆ ಕೊಹ್ಲಿ ಮುರಿದರು. ಇದರ ಪರಿಣಾಮವಾಗಿ, ಕೊಹ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಏಕೈಕ ಕ್ರಿಕೆಟಿಗರಾದರು. ಈ ಸಾಧನೆ ಮಾಡಿದ ಇತರ ಆಟಗಾರರೆಂದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ.

594 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ 27 ಸಾವಿರ ರನ್‌ ದಾಖಲೆ ಬರೆದರೆ, ಸಚಿನ್ ತೆಂಡೂಲ್ಕರ್ 623 ಇನ್ನಿಂಗ್ಸ್ ಗಳಲ್ಲಿ, ಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರು 648 ಇನ್ನಿಂಗ್ಸ್ ಗಳಲ್ಲಿ ಮತ್ತು ರಿಕಿ ಪಾಂಟಿಂಗ್‌ ಅವರು 650 ಇನ್ನಿಂಗ್ಸ್ ಗಳಲ್ಲಿ 27 ಸಾವಿರ ಅಂತಾರಾಷ್ಟ್ರೀಯ ರನ್‌ ಕಲೆ ಹಾಕಿದ್ದರು.

ಇಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 47 ರನ್‌ ಗಳಿಸಿದರು. 35 ಎಸೆತಗಳಲ್ಲಿ ಒಂದು ಸಿಕ್ಸರ್‌ ಸಹಿತ ಅವರು 47 ರನ್‌ ಬಾರಿಸಿ ಸ್ಟಂಪೌಟಾದರು.

Advertisement

ಎರಡನೇ ಇನ್ನಿಂಗ್ಸ್‌ ನಲ್ಲಿ ಕೊಹ್ಲಿ ಐದನೇ ಕ್ರಮಾಂಕದಲ್ಲಿ ಅಡಲಿಳಿದರು. 2013ರ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ಅವರು ಐದನೇ ಕ್ರಮಾಂಕದಲ್ಲಿ ಆಡಿದರು. 2013ರಲ್ಲಿ ಮುಂಬೈನ ವಾಂಖೆಡೆ ಟೆಸ್ಟ್‌ ನಲ್ಲಿ ಅವರು ಕೊನೆಯದಾಗಿ ಐದನೇ ಕ್ರಮಾಂಕದಲ್ಲಿ ಆಡಿದ್ದರು. ಅದು ಸಚಿನ್‌ ತೆಂಡೂಲ್ಕರ್‌ ಅವರ ಕೊನೆಯ ಟೆಸ್ಟ್‌ ಪಂದ್ಯ.

Advertisement

Udayavani is now on Telegram. Click here to join our channel and stay updated with the latest news.

Next