Advertisement
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಚೌಬೇಪುರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಸಬ್ ಇನ್ಸ್ ಪೆಕ್ಟರ್ ಗಳಾದ ಕನ್ವರ್ ಪಾಲ್, ಕೃಷ್ಣ ಕುಮಾರ್ ಶರ್ಮಾ ಮತ್ತು ಕಾನ್ಸ್ ಟೇಬಲ್ ರಾಜೀವ್ ಸೇರಿದಂತೆ ಮೂವರು ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ ಎಂದು ಕಾನ್ಪುರ್ ಎಸ್ ಎಸ್ ಪಿ ದಿನೇಶ್ ಕುಮಾರ್ ವಿವರಿಸಿದ್ದಾರೆ. ಮೂವರ ವಿರುದ್ದ ಎಫ್ ಐಆರ್ ಕೂಡಾ ದಾಖಲಾಗಿದೆ. ಒಂದು ವೇಳೆ ಅವರು ವಿಚಾರಣೆಯಲ್ಲಿ ತಪ್ಪಿತಸ್ಥರು ಎಂದುಸಾಬೀತಾದಲ್ಲಿ ಮುಂದಿನ ಕ್ರಮ ಎದುರಿಸಬೇಕಾಗಲಿದೆ ಎಂದು ಎಸ್ ಎಸ್ ಪಿ ತಿಳಿಸಿದ್ದಾರೆ.
Related Articles
Advertisement
ಕಾನ್ಪುರ್ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಕಾಸ್ ದುಬೆ ಮನೆ ಶೋಧದ ವೇಳೆ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದರು. ಇದರಲ್ಲಿ ಕೆಲವು ಆಯುಧ ಸಹಚರರ ಹೆಸರಿನಲ್ಲಿ ಲೈಸೆನ್ಸ್ ಹೊಂದಿದ್ದವು. ಆದರೆ ಅದನ್ನು ಉಪಯೋಗಿಸುತ್ತಿದ್ದದ್ದು ವಿಕಾಸ್ ದುಬೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ 8 ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿರುವ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮಧ್ಯಪ್ರದೇಶ ಅಥವಾ ರಾಜಸ್ಥಾನದಲ್ಲಿ ಅಡಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈತನ ಬಂಧನಕ್ಕಾಗಿ ಉತ್ತರಪ್ರದೇಶ, ನೇಪಾಳ ಗಡಿ ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ವಿಕಾಸ್ ದುಬೆ ಪೋಸ್ಟರ್ ಅಂಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.