Advertisement
ಕಣ್ಣೂರು ವಿ.ವಿ.ಯ ಕ್ರೀಡಾ ವಿಭಾಗ ಕಳರಿ, ಈಜು, ಯೋಗ ಮತ್ತು ಏರೋಬಿಕ್ ಡ್ಯಾನ್ಸ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಅಲ್ಲದೆ ಫಿಟ್‌ನೆಸ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಕಳರಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್, ಯೋಗದಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್, ಈಜು ಮತ್ತು ಫಿಟ್‌ನೆಸ್ ಮೆನೇಜ್‌ಮೆಂಟ್‌ನಲ್ಲಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಸ್ತುತ ಅಧ್ಯಯನ ವರ್ಷದಿಂದಲೇ ಆರಂಭಿಸಲು ತೀರ್ಮಾನಿಸಿದೆ. ವಿಶ್ವವಿದ್ಯಾಲಯದ ಮಾಂಗಾಟ್‌ಪರಂಬ ಕ್ಯಾಂಪಸ್‌ನಲ್ಲಿ ಈ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಫಿಟ್‌ನೆಸ್ ಮ್ಯಾನೇಜ್‌ಮೆಂಟ್, ಯೋಗ ಮತ್ತು ಈಜು ಇವುಗಳನ್ನು ತರಬೇತು ದಾರರನ್ನು ಕೇಂದ್ರೀಕರಿಸಿ ಕೋರ್ಸ್ ಗಳನ್ನು ಆರಂಭಿಸ ಲಾಗುವುದು. ಅತ್ಯುತ್ತಮ ಕ್ರೀಡಾ ತರಬೇತು ದಾರರನ್ನು ಸೃಷ್ಟಿಸುವುದು ಇದರ ಉದ್ದೇಶ ವಾಗಿದೆ. ಯೋಗದಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್ ನಡೆಯಲಿದ್ದು, ಈ ಕೋರ್ಸ್‌ಗೆ ಪದವಿ ಕನಿಷ್ಠ ಅರ್ಹತೆ ಯಾಗಿದೆ. ಪಿಟ್‌ನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಜಿಮ್ನಾಸ್ಟಿಕ್ ಮತ್ತು ಏರೋಬಿಕ್ ಡ್ಯಾನ್ಸ್, ಸ್ಕೂಬ್ ಡ್ಯಾನ್ಸ್ ಮೊದಲಾದವುಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದು ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಪ್ಲಸ್ ಟು ಕನಿಷ್ಠ ಅರ್ಹತೆಯಾಗಿದೆ. ಈಜು
ಶಾಸ್ತ್ರೀಯ ರೀತಿಯಲ್ಲಿ ಈಜು ಕಲಿಸಲಾಗುವುದು. ಅಲ್ಲದೆ ಈಜು ಪಟುಗಳಿಗೆ ತರಬೇತಿಯನ್ನು ನೀಡಲಾಗು ವುದು ಮತ್ತು ನೀರಿಗೆ ಬಿದ್ದವರನ್ನು ರಕ್ಷಿಸಲು ಅಗತ್ಯದ ತರಬೇತಿಯನ್ನು ಈಜು ಕೋರ್ಸ್‌ನಲ್ಲಿ ನೀಡಲಾಗುವುದು. ಮಾಂಗಾಟ್‌ಪರಂಬದ ಕ್ಯಾಂಪಸ್‌ನಲ್ಲಿರುವ ಈಜು ಕೊಳದಲ್ಲಿ ತರಬೇತಿ ನೀಡಲಾಗುವುದು. ಮೂರು ತಿಂಗಳ ಈ ಕೋರ್ಸ್‌ಗೆ ಪ್ಲಸ್ ಟು ಕನಿಷ್ಠ ಅರ್ಹತೆಯಾಗಿದೆ. ಜುಲೈ 30 ರಿಂದ ತರಗತಿಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17. ಹೆಚ್ಚಿನ ವಿವರಗಳನ್ನು ಕಣ್ಣೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಪಡೆಯಬಹುದು.
Related Articles
ಕಳರಿಯ ಜೊತೆಗೆ ಕಳರಿಯ ಮೂಲಕ ಚಿಕಿತ್ಸೆಯ ಕುರಿತಾಗಿ ಕಳರಿ ಡಿಪ್ಲೋಮಾ ಕೋರ್ಸ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಸಾಧಿಸಲು ಕಳರಿಯನ್ನು ಸೇರ್ಪಡೆಗೊಳಿಸುವ ಕುರಿತಾಗಿ ಯೋಜಿಸಲಾಗಿದ್ದು, ಈ ಬಗ್ಗೆ ಚಿಂತನೆ ನಡೆಯುತ್ತಿದೆ. ತಜ್ಞ ಕಳರಿ ಗುರುಗಳು ವಿಶ್ವವಿದ್ಯಾಲಯದಲ್ಲಿ ಕಳರಿಯನ್ನು ಕಲಿಸಲಿದ್ದಾರೆ. ಕಳರಿ ಅಭ್ಯಾಸಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಮಾಂಗಾಟ್‌ಪರಂಬದಲ್ಲಿ ಏರ್ಪಡಿಸಲಾಗುವುದು. ಪ್ರಥಮ ಬ್ಯಾಚ್‌ನಲ್ಲಿ 20 ಮಂದಿಗೆ ಮಾತ್ರವೇ ಪ್ರವೇಶ ನೀಡಲಾಗುವುದು. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳಲು ಕನಿಷ್ಠ ಅರ್ಹತೆ ಪ್ಲಸ್ ಟು.
Advertisement