Advertisement

ಕಣ್ಣೂರು ಏರ್‌ಪೋರ್ಟ್‌ಗೆ ಅಧಿಕೃತ ಚಾಲನೆ

09:40 AM Dec 10, 2018 | Karthik A |

ಕಣ್ಣೂರು: ಕೇರಳ ಹಾಗೂ ದಕ್ಷಿಣ ಕನ್ನಡದ ಜನತೆ ಕಾತರದಿಂದ ಎದುರು ನೋಡುತ್ತಿದ್ದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಭಾನುವಾರ ನೆರವೇರಿತು. ಈ ಮೂಲಕ ಕೇರಳ, ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಉಳಿದ ಮೂರು ನಿಲ್ದಾಣಗಳು ತಿರುವನಂತಪುರ, ಕೊಚ್ಚಿ, ಕಲ್ಲಿಕೋಟೆಯಲ್ಲಿವೆ.

Advertisement

ಕಣ್ಣೂರಿನಿಂದ 16 ಕಿ.ಮೀ. ದೂರವಿರುವ ಮಟ್ಟನ್ನೂರಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣದಿಂದ ಹೊರಟ ಮೊದಲ ವಿಮಾನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌. 186 ಪ್ರಯಾಣಿಕರನ್ನು ಅಬುಧಾಬಿಗೆ ಕರೆದೊಯ್ಯಲು ಅಣಿಯಾಗಿದ್ದ ಈ ವಿಮಾನಕ್ಕೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಸುರೇಶ್‌ ಪ್ರಭು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ನಿಲ್ದಾಣದ ಸೇವೆಗಳಿಗೆ ಅಧಿಕೃತ ಚಾಲನೆ ನೀಡಿದರು. 

ಅಭಿವೃದ್ಧಿ ಜವಾಬ್ದಾರಿ ನಮಗಿರಲಿ: ವಿಜಯನ್‌ ಮನವಿ: ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿಪಡಿಸಲು ಮುಂದಾಗಿರುವ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ ಪಿಣರಾಯಿ ವಿಜಯನ್‌, ನಿಲ್ದಾಣದ ಅಭಿವೃದ್ಧಿ ಜವಾಬ್ದಾರಿಯನ್ನು ಕೇರಳ ಸರಕಾರಕ್ಕೆ ನೀಡಬೇಕೆಂದು ಕೋರಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಕ್ಯಾಲಿಕಟ್‌ ವಿಮಾನ ನಿಲ್ದಾಣವನ್ನು ಪಿಪಿಪಿ ಅಡಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯ ಕಂಡು ಬಂದಲ್ಲಿ, ಅದರ ಜವಾಬ್ದಾರಿಯನ್ನೂ ಕೇರಳ ಸರಕಾರ ವಹಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರು, ಜೈಪುರ, ಲಕ್ನೋ ಸೇರಿದಂತೆ ಕೆಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಪಿಪಿಪಿ ಅಡಿ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next