Advertisement

ಕಸಾಪ ಕನ್ನಡಿಗರ ಏಕೈಕ ಪ್ರಾತಿನಿಧಿ ಕ ಸಂಸ್ಥೆ: ಮಹೇಶ ಜೋಶಿ

05:12 PM Jan 28, 2021 | Team Udayavani |

ಸುರಪುರ: ಕನ್ನಡ ಸಾಹಿತ್ಯ ಪರಿಷತ್‌ಗೆ ತನ್ನದೆ ಆಗಿರುವ ಒಂದು ಐತಿಹಾಸಿಕ ಪರಂಪರೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಪರಿಷತ್‌ 106 ವರ್ಷಗಳ ಇತಿಹಾಸವಿದೆ. ಕನ್ನಡಿಗರ, ಕನ್ನಡ ಸಂಸ್ಕೃತಿಯ ಏಕೈಕ ಪ್ರಾತಿನಿಧಿ ಕ ಸಂಸ್ಥೆಯಾಗಿದೆ ಎಂದು ದೆಹಲಿ ಮತ್ತು ದಕ್ಷಿಣ ಭಾರತ ದೂರದರ್ಶನದ  ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

Advertisement

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಸಮಾವೇಶ ಮತ್ತು ವಿವಿಧ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಡೆಯರ, ವಿಶ್ವೇಶ್ವರಯ್ಯ ಮತ್ತು ಸರ್‌ ಮಿರ್ಜಾ ಇಸ್ಮಾಯಿಲ್‌ ಈ ಮೂರು ಭದ್ರವಾದ ಅಡಿಗಲ್ಲು ಮೇಲೆ ನಿಂತಿರುವ ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ತನವನ್ನು ತೋರಿಸು ವಂತ ಪ್ರಮುಖ ಸಂಸ್ಥೆಯಾಗಿದೆ ಎಂದರು.

ಖ್ಯಾತ ನಾಟಕಕಾರ ಎಲ್‌ಬಿಕೆ ಆಲ್ದಾಳ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ
ಮಾತನಾಡಿದರು. ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಅಧ್ಯಕ್ಷತೆ ವಹಿಸಿದ್ದರು. ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ ಅವರು ಗಜಲ್‌ ಕವಿ ಅಲ್ಲಾಗಿರಿರಾಜ ಕನಕಗಿರಿಯವರ ಸರಕಾರ ರೊಕ್ಕ ಮುದ್ರಿಸಬಹುದು ರೊಟ್ಟಿಯಲ್ಲ ಎಂಬ ಕವನ ಸಂಕಲನ ಬಿಡುಗಡೆ ಮಾಡಿದರು.

ವಿವಿಧ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಪಂಜಗಲ್ಲ, ವೀರೇಶ ಹಳ್ಳೂರು, ಬಸಲಿಂಗಮ್ಮ ಶಾಂತಪ್ಪ ಗೋಗಿ, ಶಿವಮೂರ್ತಿ ತನಿಕೇದಾರ, ಚಂದ್ರಹಾಸ ಮಿಟ್ಟಾಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಬಸವರಾಜ ಜಮದ್ರಖಾನಿ, ರಾಜಾ ಮುಕುಂದನಾಯಕ, ಡಾ| ಸುರೇಶ ಸಜ್ಜನ್‌, ಸಿದ್ದಪ್ಪ ಹೊಟ್ಟಿ, ಜೆ.ಅಗಸ್ಟೀನ್‌, ಸಿ.ಎನ್‌ .ಭಂಡಾರಿ, ಪ್ರಕಾಶ ಅಂಗಡಿ, ಕುಮಾರಸ್ವಾಮಿ ಗುಡ್ಡೋಡಗಿ, ವೀರಸಂಗಪ್ಪ ಹಾವೇರಿ, ಶಾಂತಪ್ಪ ಬೂದಿಹಾಳ, ನಾಗರಾಜ ಜಮದ್ರಖಾನಿ ಇದ್ದರು. ಶಿವಶರಣಪ್ಪ ಶಿರೂರ ನಿರೂಪಿಸಿದರು. ಶರಣಬಸವ ಗೋನಾಲ ಸ್ವಾಗತಿಸಿದರು. ಮುದ³ಪ್ಪ ಅಪ್ಪಾಗೋಳ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next