Advertisement

ಗೋವಾದಲ್ಲಿ ಸೂರಿಗಾಗಿ ಕನ್ನಡಿಗರ ಪರದಾಟ

10:18 AM Jan 22, 2018 | |

ಪಣಜಿ(ವಾಸ್ಕೋ): ಬೈನಾದಲ್ಲಿ ಕನ್ನಡಿಗರು ಮನೆ ಕಳೆದುಕೊಂಡು ಎರಡು ದಿನಗಳು ಕಳೆದರೂ ರಾಜ್ಯ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲಕ್ಕೆ ಬಾರದಿರುವು ದರಿಂದ ಬೇರೆ ದಾರಿಯಿಲ್ಲದೆ ಬೈನಾ ಕನ್ನಡಿಗರು ಮನೆ ಬಾಡಿಗೆಗೆ ಪಡೆಯಲು ಪರದಾಡುವಂತಾಗಿದೆ.

Advertisement

ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಇತ್ತ ಮುಖ ಮಾಡದೇ ಇರುವುದು
ಇನ್ನಷ್ಟು ಬೇಸರ ಉಂಟುಮಾಡಿದೆ. ಸಿಆರ್‌ಝಡ್‌ ನಿಯಮ ಉಲ್ಲಂಘಿಸಿ ಬೈನಾದಲ್ಲಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ದಕ್ಷಿಣ ಗೋವಾ ಜಿಲ್ಲಾಡಳಿತ ಜ.18ರಂದು 32 ಮನೆಗಳ ತೆರವುಗೊಳಿಸಿತ್ತು. ಇವುಗಳಲ್ಲಿ ಸುಮಾರು 20 ಮನೆಗಳು ಕನ್ನಡಿಗರದ್ದಾಗಿವೆ. 40ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದ ಈ ಕನ್ನಡಿಗರು ಇದೀಗ ಬೀದಿಗೆ ಬಂದಿದ್ದಾರೆ. 

ಶೀಘ್ರವೇ ಇನ್ನೂ 89 ಮನೆಗಳ ತೆರವು: ಬೈನಾದಲ್ಲಿ 121 ಮನೆಗಳ ತೆರವಿಗೆ ಸಂಬಂಧಿ ಸಿದಂತೆ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿ 32 ಮನೆ ತೆರವುಗೊಳಿಸಿತ್ತು, ಆದರೆ 89 ಮನೆ ಗಳ ಮಾಲೀಕರು ತೆರವಿಗೆ ನ್ಯಾಯಾಲಯದಲ್ಲಿ ತುರ್ತು ತಡೆ ಯಾಜ್ಞೆ ಪಡೆದಿದ್ದರೂ ಆದರೆ ಅವು ತುರ್ತಾಗಿ ಬಚಾವಾದರೂ ಕೆಲವೇ ದಿನಗಳಲ್ಲಿ ತೆರವುಗೊಳಿಸುವ ಆತಂಕವಿದೆ.

ಗಗನಕ್ಕೇರಿದ ಸೈಟ್‌ ದರ?
1100 ಸೈಟ್‌ಗಳನ್ನು ಗೋವಾದ ಬೈನಾ ಬೀಚ್‌ ಪಕ್ಕದಲ್ಲಿಯೇ ಈ ನಿರಾಶ್ರಿತರಿಗೆ ಕೊಡಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಗೋವಾದಲ್ಲಿ ಒಂದು ಸೈಟ್‌ ಖರೀದಿಸಲು 210 ಸ್ಕೆÌàರ್‌ ಮೀಟರ್‌ ಜಾಗಬೇಕು. ನಗರ ಪ್ರದೇಶದಲ್ಲಿ ಒಂದು ಮೀಟರ್‌ ಜಾಗಕ್ಕೆ ಸುಮಾರು 30,000 ರೂ. ಇದ್ದು ಒಂದು ಸೈಟ್‌ ಖರೀದಿಸಲು ಕಡಿಮೆಯೆಂದರೂ 60 ಲಕ್ಷ ರೂ. ಬೇಕು. ಹೀಗಿರುವಾಗ 1100 ಸೈಟ್‌ಗಳನ್ನು ಕೊಡಿಸುವುದಾಗಿ ಹೇಗೆ ಘೋಷಿಸಿದರು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next