Advertisement

Kannada Serials; ಟಿಆರ್‌ಪಿ ರೇಸ್ ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಮಿಂಚು

06:24 PM Aug 28, 2023 | Team Udayavani |

ಕಿರುತೆರೆಯ ಟಿಆರ್‌ಪಿ ಹೊರಬಿದ್ದಿದ್ದು, “ಪುಟ್ಟಕ್ಕನ ಮಕ್ಕಳು’ ಮೊದಲ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತಂಡದ ಮೊಗದಲ್ಲಿ ಸಂತಸ ಮೂಡಿದೆ.

Advertisement

ಇನ್ನು ಕಳೆದ ವಾರ ಎರಡನೇ ಸ್ಥಾನದಲ್ಲಿ “ಸೀತಾರಾಮ’ ಧಾರಾವಾಹಿ ಆ ಟಿಆರ್‌ಪಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದೆ. ವೈಷ್ಣವಿ, ಗಗನ್‌ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ಇತ್ತೀಚೆಗಷ್ಟೇ ಆರಂಭವಾಗಿತ್ತು.

ಟಿಆರ್‌ಪಿ ರೇಸ್‌ನ ಮೂರನೇ ಸ್ಥಾನದಲ್ಲಿ “ಗಟ್ಟಿಮೇಳ’ ಧಾರಾವಾಹಿ ಇದ್ದು, ಕಳೆದ ವಾರದ ಸ್ಥಾನ ಭದ್ರಪಡಿಸಿಕೊಂಡಿದೆ. ಉಳಿದಂತೆ ಉಳಿದಂತೆ “ಶ್ರೀರಸ್ತು ಶುಭಮಸ್ತು’, “ಅಮೃತಧಾರೆ’, “ಸತ್ಯ’, “ಲಕ್ಷ್ಮೀ ಬಾರಮ್ಮ’ ಹಾಗೂ “ಗೀತಾ’ ಧಾರಾವಾಹಿಗಳಿದ್ದು, ಮತ್ತೆ ಮುಂಚೂಣಿಗೆ ಬರುವ ಸವಾಲು ಈ ಧಾರಾವಾಹಿಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next