Advertisement
ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿಯಾಗಿದ್ದ ಜಯಂತಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Related Articles
Advertisement
ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದರು.
ಜಯಂತಿ ಅಭಿನಯದ ಪ್ರಮುಖ ಚಿತ್ರಗಳು:
“ಜೇನುಗೂಡು’, “ಶ್ರೀರಾಮಾಂಜನೇಯ ಯುದ್ಧ’, “ಕಲಾವತಿ’, “ಚೆಂದವಳ್ಳಿಯ ತೋಟ’, “ಪತಿಯೇ ದೈವ’, “ತುಂಬಿದ ಕೊಡ’, “ಬೆಟ್ಟದ ಹುಲಿ’, “ಮಿಸ್. ಲೀಲಾವತಿ’, “ವಾತ್ಸಲ್ಯ’, “ಎಂದೂ ನಿನ್ನವನೆ’, “ಕಿಲಾಡಿ ರಂಗ’, “ಮಂತ್ರಾಲಯ ಮಹಾತ್ಮೆ’, “ಮಮತೆಯ ಬಂಧನ’, “ಮಹಾಶಿಲ್ಪಿ’, “ಅನುರಾಧ’, “ಇಮ್ಮಡಿ ಪುಲಿಕೇಶಿ’, “ಕಲ್ಲು ಸಕ್ಕರೆ’, “ಚಕ್ರತೀರ್ಥ’, “ದೇವರ ಗೆದ್ದ ಮಾನವ’, “ನಕ್ಕರೆ ಅದೇ ಸ್ವರ್ಗ’, “ಲಗ್ನ ಪತ್ರಿಕೆ’, “ಜೇಡರ ಬಲೆ’, “ಎರಡು ಮುಖ’, “ಗೃಹಲಕ್ಷ್ಮೀ’, “ಚೂರಿ ಚಿಕ್ಕಣ್ಣ’, “ಪುನರ್ಜನ್ಮ’, “ಭಲೇ ರಾಜ’, “ದೇವರ ಮಕ್ಕಳು’, “ನನ್ನ ತಮ್ಮ’, “ಪರೋಪಕಾರಿ’, “ಬಾಳು ಬೆಳಗಿತು’, “ಶ್ರೀಕೃಷ್ಣ ದೇವರಾಯ’, “ಸೇಡಿಗೆ ಸೇಡು’, “ಕಸ್ತೂರಿ ನಿವಾಸ’, “ಕುಲ ಗೌರವ’, “ತಂದೆ ಮಕ್ಕಳು’, “ನಾಗರ ಹಾವು’, “ವಿಷಕನ್ಯೆ’, “ಎಡಕಲ್ಲುಗುಡ್ಡದ ಮೇಲೆ’, “ಕಸ್ತೂರಿ ವಿಜಯ’, “ತುಳಸಿ’, “ದೇವರು ಕೊಟ್ಟ ವರ’, “ಬಹದ್ದೂರ್ ಗಂಡು’, “ದೇವರ ದುಡ್ಡು’, “ಶ್ರೀಮಂತನ ಮಗಳು’, “ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಮಹಾತ್ಮೆ’, “ನಾಗ ಕಾಳ ಭೈರವ’, “ಸಿಂಹದಮರಿ ಸೈನ್ಯ’, “ಕಲ್ಲುವೀಣೆ ನುಡಿಯಿತು’, “ಕೆರಳಿದ ಹೆಣ್ಣು’, “ಬೆಂಕಿ ಬಿರುಗಾಳಿ’, “ಶುಭ ಮುಹೂರ್ತ’, “ಮಸಣದ ಹೂವು’, “ಅಗ್ನಿಪರೀಕ್ಷೆ’, “ಆನಂದ್’, “ಉಷಾ’, “ತಾಯಿಯೇ ನನ್ನ ದೇವರು’, “ಏನ್ ಸ್ವಾಮಿ ಅಳಿಯಂದ್ರೆ’, “ನ್ಯಾಯಕ್ಕಾಗಿ ನಾನು’, “ಶ್ರೀಸತ್ಯನಾರಾಯಣ ಪೂಜಾಫಲ’, “ಸುಂದರಕಾಂಡ’, “ಬೆಳ್ಳಿ ಮೋಡಗಳು’, “ಜನ ಮೆಚ್ಚಿದ ಮಗ’, “ಮೇಘಮಾಲೆ’, “ರಸಿಕ’, “ಗಾಜನೂರ ಗಂಡು’, “ನಮ್ಮೂರ ಹುಡುಗ’, “ಟುವ್ವಿ ಟುವ್ವಿ ಟುವ್ವಿ’, “ನನ್ನಾಸೆಯ ಹೂವೇ’, “ಪಟೇಲ’, “ಸಾವಿರ ಮೆಟ್ಟಿಲು’.
ಕನ್ನಡದ ಮೊದಲ ಗ್ಲಾಮರಸ್ ನಟಿ :
ಕನ್ನಡ ಚಿತ್ರರಂಗದ ಮೊದಲ ಗ್ಲಾಮರಸ್ ಹಾಗೂ ಬೋಲ್ಡ್ ನಟಿ ಯಾರೆಂದರೆ ಅದಕ್ಕೆ ಉತ್ತರ ಜಯಂತಿ. ಆಗಿನ ಸಮಯಕ್ಕೆ ನಟಿಯರು ಮಡಿವಂತಿಕೆ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರು. ಆದರೆ ಜಯಂತಿ ಅವರು ಬೋಲ್ಡ್ ಆಗಿ, ರೊಮ್ಯಾಂಟಿಕ್ ಪಾತ್ರಗಳಲ್ಲಿಯೂ ಲವಲವಿಕೆಯಿಂದ ಅಭಿನಯಿಸಿದ್ದರು. 1965ರಲ್ಲಿ “ಮಿಸ್ ಲೀಲಾವತಿ’ ಸಿನಿಮಾದಲ್ಲಿ ಜಯಂತಿಯವರು ಗ್ಲಾಮರ್ ಬೊಂಬೆಯಾಗಿ ನಟಿಸಿದ್ದರು. ಮೊದಲ ಬಾರಿಗೆ ಅವರು ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕೇವಲ ಒಂದೇ ತೆರನಾದ ಪಾತ್ರಗಳಿಗೆ ಅಂಟಿಕೊಳ್ಳದೇ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವರ ತುಡಿತ ಅವರನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಿತು.